alex Certify ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್

ಜನನಿಬಿಡ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿಯೊಂದು ಓಡಿದ ಘಟನೆ ಕರಾಚಿಯಲ್ಲಿ ನಡೆದಿದೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿ ಓಡುತ್ತಿರುವ ಪಾಕಿಸ್ತಾನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.‌

ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡಿದ್ದ ಈ ಆಸ್ಟ್ರಿಚ್​ ಈ ರೀತಿ ಜನನಿಬಿಡ ಪ್ರದೇಶದಲ್ಲಿ ಓಡಾಡಿದೆ ಅಂತಾ ಕರಾಚಿ ಪತ್ರಿಕೆಗಳು ವರದಿ ಮಾಡಿದೆ. ಈ ವಿಡಿಯೋವನ್ನ ಅಲ್ಲೇ ರಸ್ತೆಯಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆಸ್ಟ್ರಿಚ್​ ಪಕ್ಷಿ ಓಡುತ್ತಿರುವುದನ್ನ ಕಂಡ ಅನೇಕ ಬೈಕ್​ ಸವಾರರು ಅಪಘಾತವಾಗದಂತೆ ನೋಡಿಕೊಳ್ಳುವ ಸಲುವಾಗಿ ಬೈಕ್​ ವೇಗ ಕಡಿಮೆ ಮಾಡಿದರೆ ಇನ್ನು ಕೆಲವರು ಸವಾರಿಯ ದಿಕ್ಕನ್ನೇ ಬದಲಿಸಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು, ಕೊರಂಗಿ ಮೃಗಾಲಯದಿಂದ ಆಸ್ಟ್ರಿಚ್​ ಪಕ್ಷಿ ತಪ್ಪಿಸಿಕೊಂಡಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಸ್ಟ್ರಿಚ್​ಗೆ ಏನೂ ಆಗದೇ ಇರಲಿ ಅಂತಾ ಪ್ರಾರ್ಥಿಸಿದ್ದಾರೆ.

— Usama Qureshi (@UsamaQureshy) January 6, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...