![](https://kannadadunia.com/wp-content/uploads/2021/01/19-2.jpg)
ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡಿದ್ದ ಈ ಆಸ್ಟ್ರಿಚ್ ಈ ರೀತಿ ಜನನಿಬಿಡ ಪ್ರದೇಶದಲ್ಲಿ ಓಡಾಡಿದೆ ಅಂತಾ ಕರಾಚಿ ಪತ್ರಿಕೆಗಳು ವರದಿ ಮಾಡಿದೆ. ಈ ವಿಡಿಯೋವನ್ನ ಅಲ್ಲೇ ರಸ್ತೆಯಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಆಸ್ಟ್ರಿಚ್ ಪಕ್ಷಿ ಓಡುತ್ತಿರುವುದನ್ನ ಕಂಡ ಅನೇಕ ಬೈಕ್ ಸವಾರರು ಅಪಘಾತವಾಗದಂತೆ ನೋಡಿಕೊಳ್ಳುವ ಸಲುವಾಗಿ ಬೈಕ್ ವೇಗ ಕಡಿಮೆ ಮಾಡಿದರೆ ಇನ್ನು ಕೆಲವರು ಸವಾರಿಯ ದಿಕ್ಕನ್ನೇ ಬದಲಿಸಿದ್ದಾರೆ. ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಕೊರಂಗಿ ಮೃಗಾಲಯದಿಂದ ಆಸ್ಟ್ರಿಚ್ ಪಕ್ಷಿ ತಪ್ಪಿಸಿಕೊಂಡಿದೆ ಅಂತಾ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಸ್ಟ್ರಿಚ್ಗೆ ಏನೂ ಆಗದೇ ಇರಲಿ ಅಂತಾ ಪ್ರಾರ್ಥಿಸಿದ್ದಾರೆ.