
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ತಾಯಿ ಚಿರತೆ ಮೋಯಾ ಮರದ ಬುಡದಲ್ಲಿ ಹಾಗೂ ಅದರ ಮರಿ ಅಮೀರಾ ಮರದ ಕೊಂಬೆಯ ಮೇಲೆ ಕುಳಿತಿದೆ. ಮೋಯಾ ಹಾಗೂ ಅಮೀರಾ ಮೊದಲು ಕೂಗುತ್ತಾರೆ. ಬಳಿಕ ಮೋಯಾ ತನ್ನ ಮಗಳು ಅಮೀರಾ ಮೇಲೆ ದಾಳಿ ಮಾಡಲು ಕೊಂಬೆಯ ಮೇಲೆ ಜಿಗಿಯುತ್ತಾಳೆ.
ಜಗಳವಾಡುತ್ತಾ ಈ ಎರಡು ಚಿರತೆಗಳು ನೆಲಕ್ಕೆ ಬೀಳುತ್ತವೆ. ನೆಲದ ಮೇಲೆ ಉರುಳಾಡುತ್ತಿದ್ದರೂ ತಾಯಿ – ಮಗಳು ತಮ್ಮ ಹೋರಾಟವನ್ನ ನಿಲ್ಲಿಸೋದಿಲ್ಲ. ಹೋರಾಟದ ಕೊನೆಯಲ್ಲಿ ಎರಡೂ ಚಿರತೆ ನೆಲದ ಮೇಲೆ ಸುಸ್ತಾಗಿ ಮಲಗುತ್ತವೆ. ಆದರೆ ಮಗಳು ಚಿರತೆ ಅಮೀರಾ ಮೊದಲು ನಿಲ್ಲುವ ಮೂಲಕ ತಾಯಿಯ ವಿರುದ್ಧ ಜಯಶಾಲಿಯಾಗುತ್ತಾಳೆ. ಹಾಗೂ ಮತ್ತೆ ಮರವನ್ನೇರಿ ಕೊಂಬೆಯ ಮೇಲೆ ಹತ್ತಿ ಕೂರುತ್ತದೆ.