ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಅಲೆಗಳ ಏರಿಳಿತ ಹಾಗೂ ಸೂರ್ಯೋದಯ/ಸೂರ್ಯಾಸ್ತಗಳನ್ನು ನಿರೀಕ್ಷಿಸಬಹುದು. ಆದರೆ ಇಲ್ಲೊಬ್ಬ ಮೀನುಗಾರ ಯಾರೂ ಊಹಿಸಿದ ಘಟನೆಯೊಂದನ್ನು ಮೀನುಗಾರಿಕೆಯ ವೇಳೆ ಕಂಡಿದ್ದಾರೆ.
ಟಾಮ್ ಬೋಡ್ಲ್ ಹೆಸರಿನ ಈ ಮೀನುಗಾರ ತನ್ನ ದೋಣಿಯ ಹಿಂಬದಿಯಲ್ಲಿ ಕುಳಿತು ಪಕ್ಷಿಳಿಗೆ ಸಣ್ಣಪುಟ್ಟ ಮೀನುಗಳನ್ನು ತಿನ್ನಲು ಕೊಡುತ್ತಿದ್ದರು. ಫ್ರಿಗೇಟ್ ಹಾಗೂ ಪೆಲಿಕನ್ ಪಕ್ಷಿಗಳು ಆತನ ದೋಣಿಯ ಬಳಿ ಹಾರಾಡುತ್ತಾ ಆತ ಕೊಡುವ ಆಹಾರವನ್ನು ಮೆಲ್ಲುತ್ತಿದ್ದವು.
ವಿಶ್ವ ಜಲ ದಿನ: ನೀರಿನ ಮಹತ್ವ ಸಾರುವ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್
ನೋಡನೋಡುತ್ತಿದ್ದಂತೆಯೇ ಕಡಲಸಿಂಹ (ಸೀ ಲಯನ್) ಒಂದು ನೀರಿನಿಂದ ಮೇಲೆದ್ದು ತನ್ನ ರೆಕ್ಕೆಗಳನ್ನು ದೋಣಿಯ ಹಿಂಬದಿಯಲ್ಲಿ ಇಟ್ಟಿದೆ. ಈ ದೃಶ್ಯದ ವಿಡಿಯೋ ಮಾಡಿಕೊಂಡಿರುವ ಬಾಡ್ಲ್, “ಮೈನವಿರೇಳಿಸುವ ಪ್ರದರ್ಶನ. ಕೊನೆಯವರೆಗೂ ನೋಡಲು ಚಂದ” ಎಂದು ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
https://twitter.com/TomBoadle/status/1372614686496190475?ref_src=twsrc%5Etfw%7Ctwcamp%5Etweetembed%7Ctwterm%5E1372614686496190475%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fwatch-till-the-end-man-gets-unexpected-visitor-while-feeding-fish-to-birds-from-his-boat-watch%2F735482