ಮಾನವ ಹಾಗೂ ಶ್ವಾನದ ಸಂಬಂಧಕ್ಕೆ ಯುಗಾಂತರದ ಇತಿಹಾಸವಿದೆ. ಸ್ವಾಮಿನಿಷ್ಠೆಯನ್ನ ತೋರುವ ಶ್ವಾನವನ್ನ ಮೊದಲಿನಿಂದಲೂ ಮಾನವ ಹಚ್ಚಿಕ್ಕೊಂಡೇ ಬಂದಿದ್ದಾನೆ. ಈ ಮಾತಿಗೆ ತಾಜಾ ಉದಾಹರಣ ಎಂಬಂತೆ ಟ್ವಿಟರ್ನಲ್ಲಿ ಶೇರ್ ಆದ ಈ ವಿಡಿಯೋದಲ್ಲಿ ಮನುಷ್ಯ ಹಾಗೂ ಶ್ವಾನ ಅವಿನಾಭಾವ ಸಂಬಂಧ ಕಂಡ ನೆಟ್ಟಿಗರ ಕಣ್ಣು ತೇವಗೊಂಡಿದೆ.
ಸಾಮಾನ್ಯವಾಗಿ ಪಾರ್ಕ್ಗಳಿಗೆ ಮಕ್ಕಳನ್ನ ಕರೆದುಕೊಂಡು ಹೋಗಿ ತಾತ – ಅಜ್ಜಿಯಂದಿರು ಆಟವಾಡಿಸ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಲ್ಪಟ್ಟ ಈ ವಿಡಿಯೋದಲ್ಲಿ ವೃದ್ಧನೊಬ್ಬ ತನ್ನ ಮುದ್ದಾದ ನಾಯಿಯನ್ನ ಪುಟ್ಟ ಮಕ್ಕಳಂತೆ ಆಟವಾಡಿಸಿದ್ದಾನೆ. 15 ಸೆಕೆಂಡ್ಗಳ ಈ ವಿಡಿಯೋ ಲಕ್ಷಗಟ್ಟಲೇ ಲೈಕ್ಸ್ ಪಡೆದುಕೊಂಡಿದೆ.
https://twitter.com/akkitwts/status/1333583667369635840