
ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಸೋಮವಾರ ಬೆಳಿಗ್ಗೆ ವೇಳೆ ಬೆಂಗಾಲಿ ಹುಲಿಯೊಂದು ಅಡ್ಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಇವಿ ವಾಲ್ ಡ್ರೈವ್‌ನಲ್ಲಿರುವ 1100 ಬ್ಲಾಕ್‌ನ ನಿವಾಸಿಯೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಹುಲಿಯ ಕತ್ತಿನ ಸುತ್ತ ಕಾಲರ್ ಒಂದು ಇದ್ದು, ಅದು ಆ ಪ್ರದೇಶದ ನಿವಾಸಿಗಳನ್ನು ನೋಡುತ್ತಿತ್ತು ಎಂದು ತಮಗೆ ಕರೆ ಮಾಡಿದ ನಿವಾಸಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಕೆಲವೊಂದು ನಿವಾಸಿಗಳು ಗನ್‌ಗಳನ್ನು ಹಿಡಿದು ಬೀದಿಗೂ ಇಳಿದಿದ್ದರು.
ಸಾಮಾಜಿಕ ಅಂತರ ಪಾಲಿಸದ ಜನತೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ
ಅಷ್ಟರಲ್ಲಿ ಬಿಳಿ ಬಣ್ಣದ ಜೀಪ್ ಚೆರೋಕೆಯಲ್ಲಿ ಬಂದ ವ್ಯಕ್ತಿಯೊಬ್ಬ ಹುಲಿಯನ್ನು ಮರಳಿ ನಿಯಂತ್ರಣಕ್ಕೆ ಪಡೆದು ಅದನ್ನು ಅಲ್ಲಿಂದ ಕೊಂಡೊಯ್ದಿದ್ದಾಗಿ ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ. ಹುಲಿ ಎಲ್ಲಿಂದ ಬಂತು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಘಟನೆಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ಸಖತ್ ಶಾಕ್ ಕೊಟ್ಟಿವೆ.