alex Certify ಘೇಂಡಾಮೃಗದ ಹಾಸಿಗೆ ಪ್ರೀತಿ ನೋಡಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಘೇಂಡಾಮೃಗದ ಹಾಸಿಗೆ ಪ್ರೀತಿ ನೋಡಿದ್ದೀರಾ…?

Watch: Orphan Baby Rhino Sleeps under His 'Comfort Blanket' in Heart-warming Video in Kenya

ಮಕ್ಕಳು ಹೆಚ್ಚಾಗಿ ತಮ್ಮ ಹಾಸಿಗೆ ಹಾಗೂ ಬೆಡ್​ಶೀಟ್​ಗಳು ತಮಿಗಿಷ್ಟದಂತೆ ಇರಬೇಕು ಅಂತಾ ಬಯಸುತ್ತವೆ. ತಮ್ಮಿಷ್ಟದ ಕಂಬಳಿ ಹೊದ್ದು ಮಲಗಿದ್ರೆ ಮಕ್ಕಳಿಗೆ ಅದೇನೋ ಒಂದು ರೀತಿ ಸುರಕ್ಷತಾಭಾವ ಬಂದಂತೆ ಎನಿಸಿಬಿಡುತ್ತೆ. ಆದರೆ ಈ ಅಭ್ಯಾಸ ಮಕ್ಕಳಿಗಷ್ಟೇ ಅಲ್ಲ ಪ್ರಾಣಿಗಳಿಗೂ ಇದೆ ಅನ್ನೋದನ್ನ ಪುಟಾಣಿ ಘೇಂಡಾಮೃಗವೊಂದು ತೋರಿಸಿಕೊಟ್ಟಿದೆ.

ಕೀನ್ಯಾ ದೇಶದ ಶೆಲ್ಡ್ರಿಕ್​ ವೈಲ್ಡ್ ಲೈಫ್​ ಟ್ರಸ್ಟ್​ನಲ್ಲಿರುವ ಘೇಂಡಾಮೃಗದ ಮರಿಯೊಂದು ಕಂಬಳಿಯಲ್ಲಿ ಬೆಚ್ಚಗೆ ಮಲಗಿದೆ. ಘೇಂಡಾ ಮೃಗದ 17 ಸೆಕೆಂಡ್​ಗಳ ಮುದ್ದಾದ ವಿಡಿಯೋವನ್ನ ಟ್ರಸ್ಟ್​ ಟ್ವೀಟರ್​ನಲ್ಲಿ ಪೋಸ್ಟ್ ಮಾಡಿದೆ.

ಅಪೋಲೋ ಹೆಸರಿನ ಈ ಘೇಂಡಾ ಮೃಗ ಅನಾಥವಂತೆ. ಒಂದು ವರ್ಷದ ಹಿಂದೆ ಟ್ರಸ್ಟ್​​ಗೆ ಬಂದು ಸೇರಿದ ಈ ಘೇಂಡಾಮೃಗಕ್ಕೆ ಆ ಕಂಬಳಿ ಅಂದರೆ ಬಲುಪ್ರೀತಿಯಂತೆ. ಹೀಗಾಗಿ ಆ ಕಂಬಳಿಯನ್ನೇ ಟೆಂಟ್​ ರೀತಿ ಮಾಡಿಕೊಂಡು ಈ ಅಪೋಲೋ ನಿತ್ಯ ನಿದ್ದೆ ಮಾಡುತ್ತದೆ ಅಂತಾ ಟ್ರಸ್ಟ್ ಮಾಹಿತಿ ನೀಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...