alex Certify ಸೋಂಕಿತರಿಗೆ ಧೈರ್ಯ ತುಂಬಲು ಗಿಟಾರ್​ ನುಡಿಸಿದ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿತರಿಗೆ ಧೈರ್ಯ ತುಂಬಲು ಗಿಟಾರ್​ ನುಡಿಸಿದ ನರ್ಸ್

ಕೊರೊನಾ ಆರ್ಭಟ ಶುರುವಾದಾಗಿನಿಂದಲೂ ರೋಗಿಗಳ ಜೀವವನ್ನ ಉಳಿಸೋಕೆ ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ವೈದ್ಯರು ಹಾಗೂ ನರ್ಸ್​ಗಳು ಕೋವಿಡ್​ ಸೋಂಕಿತರಿಗೆ ಧೈರ್ಯ ತುಂಬಲು ಮಾಡುತ್ತಿರುವ ಪ್ರಯತ್ನದ ಬಗೆಗಿನ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೇ ಸಾಲಿಗೆ ಸೇರಿದ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಈ ವಿಡಿಯೋದಲ್ಲಿ ಆ್ಯಮಿ ಲೈನ್​​ ಹೌಸನ್ ಎಂಬಾಕೆ ಕೋವಿಡ್​ ಐಸಿಯು ರೂಮಿನ ಎದುರು ನಿಂತು ʼನೀನು ಒಂಟಿ ಅಲ್ಲʼ ಎಂಬ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕವಾಗಿ ಹಂಚಿಕೆಯಾಗಿದೆ. ವಿಡಿಯೋದಲ್ಲಿ ನರ್ಸ್​ ಕೈಯಲ್ಲಿ ಗಿಟಾರ್​ ಹಿಡಿದಿದ್ದು ಮುಖಕ್ಕೆ ಮಾಸ್ಕ್​ ಹಾಕಿದ್ದಾರೆ.

ಸೋಂಕಿತರೆಲ್ಲ ತಮ್ಮ ಜೀವನದ ಕಠಿಣ ಘಟ್ಟದಲ್ಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಅವರಿಗೆ ಸಮಾಧಾನ ಎನ್ನಿಸುವ ಯಾವುದಾದರೂ ಕಾರ್ಯವನ್ನ ನಾನು ಮಾಡಬೇಕು. ಹೀಗಾಗಿ ನಾನು ಹಾಡಿನ ಮೂಲಕ ಧೈರ್ಯ ತುಂಬಿದೆ ಅಂತಾರೆ ಹೌಸನ್​. ಈ ವಿಡಿಯೋ 75 ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...