
ಮೆಕ್ಸಿಕೋದ ಈಶಾನ್ಯ ಭಾಗದ ಮೇಲೆ ಭಾರೀ ಬೆಳಕಿನ ಪ್ರಕಾಶ ಕಾಣಿಸಿಕೊಂಡಿದ್ದು ಈ ಘಟನಾವಳಿಯ ವಿಡಿಯೋಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಉಲ್ಕಾ ಶಿಲೆ ಇರಬಹುದು ಎಂದು ಶಂಕಿಸಲಾದ ಈ ಬೆಂಕಿಯುಂಡೆಯನ್ನು ಇಲ್ಲಿನ ಮಾಂಟೆರ್ರೆ ಪ್ರದೇಶದಲ್ಲಿ ಕಾಣಲಾಗಿದೆ. ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಉಲ್ಕಾ ಶಿಲೆ ಛಿದ್ರಗೊಂಡು ಹೀಗೆ ಆಗಿರಬಹುದು ಎಂದು ಮೆಕ್ಸಿಕೋದ ರಕ್ಷಣಾ ಇಲಾಖೆ ತಿಳಿಸಿದೆ.
ಮೆಕ್ಸಿಕೋದ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಡೆಲ್ಟಾ ಚಂಡಮಾರುತ ಅಪ್ಪಳಿಸಿದ ಕೂಡಲೇ ಮೇಲ್ಕಂಡ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳ ವರದಿಗಳು ತಿಳಿಸಿವೆ.