ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ.
ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು ಸಾಗರದಲ್ಲಿ ಈಜುತ್ತಿದ್ದ ವೇಳೆ ಶಾರ್ಕ್ ಒಂದರ ತೀರಾ ಸನಿಹದಲ್ಲಿ ಹಾದು ಬಂದಿದ್ದಾರೆ. ಈ ಘಟನೆಯ ಡ್ರೋನ್ ಫುಟೇಜ್ ಒಂದು ವೈರಲ್ ಆಗಿದೆ.
ದೈತ್ಯ ಹ್ಯಾಮರ್‌ಹೆಡ್ ಶಾರ್ಕ್ ಇದಾಗಿದ್ದು, ಆತನ ಬಳಿಯೇ ಹಾದು ಹೋಗುತ್ತಿರುವ ವಿಡಿಯೋವನ್ನು ಜೇಸನ್ ಮೆಕ್‌ಇಂತೋಷ್ ತಮ್ಮ ಇನ್‌ಸ್ಟಾಗ್ರಾಂ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CHqjkcxj1_X/?utm_source=ig_web_copy_link