
ಬ್ಯಾಂಕಾಂಕ್ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಈ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ವಿಮಾನ ಚಲಾವಣೆ ಸ್ಥಿತಿಯಲ್ಲಿ ಇದ್ದಾಗಲೇ ರನ್ ವೇದಲ್ಲಿ ಕಾರು ಹೋಗುತ್ತಿರೋದನ್ನ ನೀವು ಕಾಣಬಹುದಾಗಿದೆ.
ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕೂಡಲೇ ಚಾಲಕನನ್ನ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಕಾರನ್ನ ಸೀಜ್ ಮಾಡೋದ್ರ ಜೊತೆಗೆ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.