
ಸಮುದ್ರ ಬಿಟ್ಟು ನೆಲದ ಮೇಲೆ ಬಂದ ಬೃಹತ್ ಗಾತ್ರದ ಸೀಲ್ ಒಂದು ಚಿಲಿ ದೇಶದ ಪಟ್ಟಣವೊಂದರ ರಸ್ತೆಗಳಲ್ಲೆಲ್ಲಾ ಅಡ್ಡಾಡಿದೆ.
ಮೂರು ಟನ್ ತೂಕವಿರುವ ಈ ಸೀಲ್, ಬೀದಿಗಳಲ್ಲಿ ಅಡ್ಡಾಡುವಾಗ ದಾರಿಹೋಕರೆಲ್ಲಾ ತಂತಮ್ಮ ಮೊಬೈಲ್‌ಗಳಿಂದ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
ರಾಜಧಾನಿ ಸ್ಯಾಂಟಿಯಾಗದ ಬಳಿ ಇರುವ ಬಂದರು ನಗರ ಪುರ್ಟೋ ಸಿಸ್ನೆಸ್‌ನಲ್ಲಿ ಈ ದೈತ್ಯ ಸಸ್ತನಿಯನ್ನು ಕಂಡ ಪೊಲೀಸರು ಹಾಗೂ ನೌಕಾಪಡೆಯ ಅಧಿಕಾರಿಗಳು ಅದನ್ನು ಮರಳಿ ಸಮುದ್ರದತ್ತ ಕರೆದೊಯ್ದಿದ್ದಾರೆ.