
ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ.
ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ಲಿಲ್ಲಿ ಟೇಲರ್ ಎಂಬ 28 ವರ್ಷದ ಗಾಯಕಿ ಪ್ರಸಿದ್ಧರಾದವರು.
7 ನಿಮಿಷದ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಹಂಚಿಕೆಯಾಗಿದ್ದು, ಲಿಲ್ಲಿ ತಮ್ಮನ್ನು ಪರಿಚಯ ಮಾಡಿಕೊಂಡು ಪ್ರಸಿದ್ಧ “ಬ್ರಿಂಗ್ ಮಿ ಟು ಲೈಫ್” ಎಂಬ ಹಾಡು ಹಾಗೂ ಇವಾ ಕಾಸಿಡೇ ಅವರ “ಸಾಂಗ್ ಬರ್ಡ್” ಹಾಡು ಹಾಡುತ್ತಾರೆ. ಅವರ ಧ್ವನಿ ಮಂತ್ರಮುಗ್ದಗೊಳಿಸುವಂತಿದ್ದು, ವಿಡಿಯೋ ಜಾಲತಾಣದಲ್ಲಿ 4.5 ಸಾವಿರ ವೀಕ್ಷಣೆಯನ್ನು ಪಡೆದಿದೆ.
ಅವರ ಹಾಡಿನಿಂದ ಖುಷಿಯಾದ ಹಲವರು “ಒನ್ಸ್ ಮೋರ್” ಎಂದು ಬರೆದಿದ್ದಾರೆ.
https://www.facebook.com/LilyTWSoprano/videos/706385696819985
https://www.facebook.com/LilyTWSoprano/videos/609156179741206