ಮೆಕ್ಸಿಕೋದ ದ್ವೀಪವೊಂದರ ಮೇಲೆ ಹಾರಾಟ ನಡೆಸಿದ ಡ್ರೋಣ್ ಕ್ಯಾಮರಾದ ಕಣ್ಣಿಗೆ ಕುಳಿಯೊಳಗೆ ಇದ್ದ ಸುಂದರ ಸಮುದ್ರವೊಂದು ಕಂಡಿದೆ.
ಫೋಟೋಗ್ರಾಫರ್ ಟರಾಸಿಯೋ ಸೌರೇಜ್ ಅವರು ಮೆಕ್ಸಿಕೋದ ಮೆರಿಯಟಾಸ್ ದ್ವೀಪದ ಮೇಲೆ ಡ್ರೋಣ್ ಕ್ಯಾಮರಾ ಹಾರಿಸಿದ್ರು. ಇದೇ ದ್ವೀಪದಲ್ಲಿದ್ದ ಹಿಡನ್ ಬೀಚ್ ಡ್ರೋಣ್ ಕಣ್ಣಲ್ಲಿ ಅತ್ಯಂತ ಅಮೋಘವಾಗಿ ಗೋಚರವಾಗಿದೆ.
ಬಹಳ ವರ್ಷಗಳ ಹಿಂದೆ ಜ್ವಾಲಾಮುಖಿ ಚಟುವಟಿಕೆಯಿಂದಾಗಿ ಈ ಮೆರಿಯೆಟಾಸ್ ದ್ವೀಪಗಳು ರೂಪುಗೊಂಡಿದ್ದವು. ಈ ದ್ವೀಪವನ್ನ ಮೆಕ್ಸಿಕನ್ ಸರ್ಕಾರ ಮಿಲಟರಿ ಅಭ್ಯಾಸಕ್ಕೆ ಬಳಸಿಕೊಳ್ತಿದೆ. ಇಲ್ಲಿ ಪದೇ ಪದೇ ಬಾಂಬ್ ಸ್ಪೋಟ ಮಾಡಿದ್ದರಿಂದ ಉಂಟಾದ ಕುಳಿಗಳಿಂದಾಗಿ ಬೀಚ್ ಸೃಷ್ಟಿಯಾಗಿದೆ ಅಂತಾ ಹೇಳಲಾಗ್ತಿದೆ.
2005ರಲ್ಲಿ ಮೆಕ್ಸಿಕನ್ ಸರ್ಕಾರ ಈ ದ್ವೀಪಗಳನ್ನ ರಾಷ್ಟ್ರೀಯ ಉದ್ಯಾನವನವೆಂದು ಗುರುತಿಸಿದೆ. ಹಾಗೂ ಈ ದ್ವೀಪ ಮೆಕ್ಸಿಕನ್ ಫೆಡರಲ್ ಸರ್ಕಾರದ ವಶದಲ್ಲಿದೆ. ದ್ವೀಪದಲ್ಲಿರುವ ಜೀವ ಸಂಕುಲ ಹಾಗೂ ಸಸ್ಯ ಪ್ರಬೇಧಗಳನ್ನ ರಕ್ಷಿಸುವ ಸಲುವಾಗಿ ಈ ಕಡಲತೀರದ ಬಳಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.
https://www.facebook.com/auroraborealisobservatory/videos/965887140583599