alex Certify ಟ್ರಕ್​​ ಡ್ಯಾಶ್​ಕ್ಯಾಮ್​ನಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಅಪಘಾತದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್​​ ಡ್ಯಾಶ್​ಕ್ಯಾಮ್​ನಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಅಪಘಾತದ ದೃಶ್ಯ

ರಸ್ತೆಯಲ್ಲಿ ಇತರೆ ವಾಹನಗಳನ್ನ ಹಿಂದಿಕ್ಕುವ ಭರದಲ್ಲಿ ಪಿಕಪ್​ ಟ್ರಕ್​ ಒಂದು ಅಪಘಾತಕ್ಕೀಡಾಗಿದ್ದು ಎದೆ ಝಲ್​ ಎನ್ನಿಸುವ ದೃಶ್ಯ ಎದುರಿನಿಂದ ಬರುತ್ತಿದ್ದ ಟ್ರಕ್​ ಒಂದರ ಡ್ಯಾಶ್​ ಕ್ಯಾಮ್​ನಲ್ಲಿ ಸೆರೆಯಾಗಿದೆ.

ವೇಗವಾಗಿ ಪಿಕಪ್​ ಚಲಾಯಿಸಿಕೊಂಡು ಬಂದ ಡ್ರೈವರ್​ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಈ ಘಟನೆಯು ಅಮೆರಿಕದ ಫ್ಲೋರಿಡಾದ ಹೆದ್ದಾರಿಯಲ್ಲಿ ನಡೆದಿದೆ.

ಲಾಂಗ್​ಟ್ರಕ್​ನ ಡ್ಯಾಶ್​ ಕ್ಯಾಮ್​ನಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಪಿಕಪ್​ ವಾಹನವು ಉಳಿದ ವಾಹನಗಳನ್ನ ಹಿಂದಿಕ್ಕಲು ಪ್ರಯತ್ನಿಸುತ್ತಿರೋದನ್ನ ನೀವು ನೋಡಬಹುದಾಗಿದೆ. ವಾಹನವು ಕಂದಕಕ್ಕೆ ಬಿದ್ದ ರಭಸಕ್ಕೆ ಒಮ್ಮೆಲೆ ರಸ್ತೆ ತುಂಬೆಲ್ಲಾ ಧೂಳೆದ್ದಿದೆ.

ಯುಟ್ಯೂಬ್​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದ್ದು ಇದನ್ನ ನೋಡಿದ ನೆಟ್ಟಿಗರು ಪಿಕಪ್​ ವಾಹನದ ಚಾಲಕನ ನಿರ್ಲಕ್ಷ್ಯದ ಚಾಲನೆ ಬಗ್ಗೆ ಬೇಸರ ಹೊರಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...