alex Certify ಟಿವಿಯಲ್ಲಿ ಲೈವ್​ ಪ್ರಸಾರವಾಗುತ್ತಿದ್ದಾಗಲೇ ಆಯತಪ್ಪಿ ಬಿದ್ದ ಯುವತಿ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿಯಲ್ಲಿ ಲೈವ್​ ಪ್ರಸಾರವಾಗುತ್ತಿದ್ದಾಗಲೇ ಆಯತಪ್ಪಿ ಬಿದ್ದ ಯುವತಿ..! ವಿಡಿಯೋ ವೈರಲ್​

ಪತ್ರಕರ್ತರು ಲೈವ್​ ವರದಿ ನೀಡುತ್ತಿರುವಾಗಲೇ ಬ್ಯಾಕ್​ಗ್ರೌಂಡ್​ನಲ್ಲಿ ವಿಚಿತ್ರ ಘಟನೆಗಳು ನಡೆದಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನ ಕಂಡಿದ್ದೇವೆ.

ಇದೇ ರೀತಿ ಎಂಎಸ್​ಎನ್​​ಬಿಸಿ ಚಾನೆಲ್​ನಲ್ಲಿ ವರದಿಗಾರ ಸುದ್ದಿ ವರದಿ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಸೈಕಲ್​ನಿಂದ ಆಯತಪ್ಪಿ ಬಿದ್ದಿದ್ದಾಳೆ. ಈ ವಿಡಿಯೋ ವೈರಲ್​ ಆಗಿದ್ದು ಸೈಕಲ್​ನಿಂದ ಬಿದ್ದ ಯುವತಿ ರಾತ್ರಿ ಬೆಳಗಾಗೋದ್ರೊಳಗೆ ಸ್ಟಾರ್​ ಆಗಿದ್ದಾಳೆ.

ಅಬ್ಬಬ್ಬಾ……! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ

ಎಮ್​ಎಸ್​ಎನ್​ಬಿಸಿ ಚಾನೆಲ್​ನ ವರದಿಗಾರ ದಕ್ಷಿಣ ಕ್ಯಾಲಿಫೋರ್ನಿಯಾದ ನಗರದಲ್ಲಿ ಕೋವಿಡ್​ ಪರಿಸ್ಥಿತಿ ಬಗ್ಗೆ ವರದಿ ನೀಡುತ್ತಿದ್ದರು. ಈ ವೇಳೆ ಸೈಕಲ್​ನಲ್ಲಿ ತೆರಳುತ್ತಿದ್ದ ಯುವತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದೇ ತಡ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಬಿದ್ದ ಸ್ಥಳದಿಂದ ಮೇಲೆಳುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.

ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಪತ್ರಕರ್ತನೇ ಪೋಸ್ಟ್ ಮಾಡಿದ್ದು ಆಕೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

— Guad Venegas (@Guadvenegas) May 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...