
ಇದೇ ರೀತಿ ಎಂಎಸ್ಎನ್ಬಿಸಿ ಚಾನೆಲ್ನಲ್ಲಿ ವರದಿಗಾರ ಸುದ್ದಿ ವರದಿ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಸೈಕಲ್ನಿಂದ ಆಯತಪ್ಪಿ ಬಿದ್ದಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು ಸೈಕಲ್ನಿಂದ ಬಿದ್ದ ಯುವತಿ ರಾತ್ರಿ ಬೆಳಗಾಗೋದ್ರೊಳಗೆ ಸ್ಟಾರ್ ಆಗಿದ್ದಾಳೆ.
ಅಬ್ಬಬ್ಬಾ……! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ
ಎಮ್ಎಸ್ಎನ್ಬಿಸಿ ಚಾನೆಲ್ನ ವರದಿಗಾರ ದಕ್ಷಿಣ ಕ್ಯಾಲಿಫೋರ್ನಿಯಾದ ನಗರದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ವರದಿ ನೀಡುತ್ತಿದ್ದರು. ಈ ವೇಳೆ ಸೈಕಲ್ನಲ್ಲಿ ತೆರಳುತ್ತಿದ್ದ ಯುವತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದೇ ತಡ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಬಿದ್ದ ಸ್ಥಳದಿಂದ ಮೇಲೆಳುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಪತ್ರಕರ್ತನೇ ಪೋಸ್ಟ್ ಮಾಡಿದ್ದು ಆಕೆಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.