ಆನ್ಲೈನ್ನಲ್ಲಿ ನಾವು ಬಹಳಷ್ಟು ಬಾರಿ ಫನ್ನಿ ಹಾಗೂ ವಿಚಿತ್ರ ಚಾಲೆಂಜ್ ಗಳನ್ನು ನೋಡುತ್ತಲೇ ಬರುತ್ತೇವೆ. ಇದೀಗ ಈ ಪಟ್ಟಿಗೆ “Pretend to pat your pet” ಎಂಬ ಹೊಸ ಸೇರ್ಪಡೆಯಾಗಿದೆ.
ಈ ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ತಮ್ಮ ಸಾಕು ಪ್ರಾಣಿಯ ತಲೆಯ ಬಳಿ ಕೈ ತೆಗೆದುಕೊಂಡು ಹೋಗಿ ಇನ್ನೇನು ಸವರುವಂತೆ ಮಾಡಬೇಕು ಆದರೆ ಸವರುವಂತಿಲ್ಲ. ಆಗ ಆ ಸಾಕು ಪ್ರಾಣಿಯ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾತಲಾಣದಲ್ಲಿ ಶೇರ್ ಮಾಡುವುದು ಈ ಚಾಲೆಂಜ್ನ ಸಾರ.
ನಾಯಿ, ಬೆಕ್ಕು, ಪಕ್ಷಿಗಳ ಮೇಲೆಲ್ಲಾ ಅವುಗಳನ್ನು ಸಾಕಿದವರು ಹೀಗೆ ಮಾಡಿ, ಆ ಸನ್ನಿವೇಶಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕು ಪಕ್ಷಿಯ ತಲೆಯ ಬಳಿ ಹಸ್ತವನ್ನು ತಂದು ಹಾಗೇ ನಿಲ್ಲಿಸಿದ್ದಾರೆ. ತನ್ನ ತಲೆನೇವರಿಸಬಹುದು ಎಂದುಕೊಂಡು ನೆಟ್ಟಗೆ ನಿಲ್ಲುವ ಆ ಪಕ್ಷಿಯು ಕೆಲ ಕ್ಷಣಗಳ ಬಳಿಕ ಖುದ್ದು ತನ್ನ ತಲೆಯನ್ನು ತನ್ನ ಸಾಕಿದವನ ಕೈ ಬಳಿಗೆ ತಂದು, ತಲೆ ಸವರುವಂತೆ ಪ್ರೇರೇಪಿಸುತ್ತದೆ.
https://twitter.com/backt0nature/status/1305250399515860993?ref_src=twsrc%5Etfw%7Ctwcamp%5Etweetembed%7Ctwterm%5E1305250399515860993%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwatch-bird-reacts-to-pretend-to-pat-your-pet-challenge-and-it-is-adorable-2878867.html