ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಮಿಲಿಯನ್ಗಟ್ಟಲೇ ಮಕ್ಕಳನ್ನ ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನ ಎಸಗಲಾಗುತ್ತಿದೆ.
#saveourchildren ಮತ್ತು #endchildtrafficking ಎಂಬ ಹ್ಯಾಶ್ಟ್ಯಾಗ್ಗಳ ಅಡಿಯಲ್ಲಿ ಲಾಸ್ ಎಂಜಲೀಸ್ನಿಂದ ಲಂಡನ್ವರೆಗೆ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವನ್ನ ಶೇರ್ ಮಾಡಲಾಗುತ್ತಿದೆ.
ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ವಿಚಾರವಾಗಿ ಬಹಿರಂಗಪಡಿಸಲಾದ ದತ್ತಾಂಶಗಳ್ಯಾವುವೂ ನಿಖರವಾಗಿಲ್ಲ. 40 ಪ್ರತಿಶತಕ್ಕೂ ಕಡಿಮೆ ಸಂತ್ರಸ್ತರು ಬಾಲ್ಯದ ದಿನಗಳಲ್ಲಿ ಕಿರುಕುಳಕ್ಕೆ ಒಳಗಾಗಿರ್ತಾರೆ. ಆಸ್ಟ್ರೇಲಿಯಾದ ರಾಯಲ್ ಕಮಿಷನ್ ಹೇಳುವಂತೆ ಮಹಿಳೆಯರಿಗೆ 20 ವರ್ಷ ಹಾಗೂ ಪುರುಷರು 25ವರ್ಷವಾಗುವರೆಗೂ ಕಿರುಕುಳವನ್ನ ಅನುಭವಿಸ್ತಾರೆ. ಆದರೆ ಕೆಲವರು ಇದನ್ನ ಬಹಿರಂಗ ಮಾಡಲು ಇಚ್ಚಿಸೋದಿಲ್ಲ ಎಂದು ಹೇಳಿದೆ.
ಹತ್ತರಲ್ಲಿ ಒಂದು ಮಗು 18 ವರ್ಷದ ಒಳಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತದೆ. ಈ ಪ್ರಮಾಣವು 7ರಲ್ಲಿ ಒಂದು ಹೆಣ್ಣು ಮಗು (14%) ಹಾಗೂ 25 ಬಾಲಕರಲ್ಲಿ ಒಬ್ಬ (4%) ಆಗಿದೆ.
ಲೈಂಗಿಕ ದೌರ್ಜನ್ಯ ನಡೆಸುವವರು ಸಾಮಾನ್ಯವಾಗಿ ಮಕ್ಕಳಿಗೆ ತುಂಬಾ ಪರಿಚಯ ಇರುವವರು ಇಲ್ಲವೇ ಪೋಷಕರೇ ಆಗಿದ್ದಾರೆ. ಅಥವಾ ಸಂಬಂಧಿಕರಿಂದಲೇ ಲೈಂಗಿಕ ದೌರ್ಜನ್ಯ ಉಂಟಾಗುತ್ತದೆ. 15 %ಕ್ಕಿಂತಲೂ ಕಡಿಮೆ ಪ್ರಮಾಣದ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರು ಅಪರಿಚಿತರಾಗಿದ್ದಾರೆ.
ಅಮೆರಿಕದ ಬ್ಯುರೋವೊಂದು ನಡೆಸಿದ ಅಧ್ಯಯನದ ಪ್ರಕಾರ 17 ವರ್ಷದ ಒಳಗಿನ 7.5 ಪ್ರತಿಶತ ಯುವತಿಯರು ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಾಗಿದ್ದಾರೆ. ಹಾಗೂ 5 ಪ್ರತಿಶತ ಯುವಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ್ತಾರೆ. 2016ರಲ್ಲಿ ಆಸ್ಟ್ರೆಲಿಯಾ ಬ್ಯೂರೋ ನಡೆಸಿದ ಅಧ್ಯಯನದ ಪ್ರಕಾರ ಅಪರಿಚಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ 16 ವರ್ಷದ ಒಳಗಿನ 11.5 % ಬಾಲಕಿಯರು ಹಾಗೂ 15 % ಬಾಲಕರು ಇದ್ದಾರೆ.