alex Certify ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ʼಶಾಕಿಂಗ್ʼ​ ಮಾಹಿತಿ ಬಹಿರಂಗ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ʼಶಾಕಿಂಗ್ʼ​ ಮಾಹಿತಿ ಬಹಿರಂಗ…..!

ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವದಲ್ಲಿ ಮಿಲಿಯನ್​ಗಟ್ಟಲೇ ಮಕ್ಕಳನ್ನ ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನ ಎಸಗಲಾಗುತ್ತಿದೆ.

#saveourchildren ಮತ್ತು #endchildtrafficking ಎಂಬ ಹ್ಯಾಶ್​ಟ್ಯಾಗ್​ಗಳ ಅಡಿಯಲ್ಲಿ ಲಾಸ್​ ಎಂಜಲೀಸ್​ನಿಂದ ಲಂಡನ್​​ವರೆಗೆ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವನ್ನ ಶೇರ್​ ಮಾಡಲಾಗುತ್ತಿದೆ.

ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ವಿಚಾರವಾಗಿ ಬಹಿರಂಗಪಡಿಸಲಾದ ದತ್ತಾಂಶಗಳ್ಯಾವುವೂ ನಿಖರವಾಗಿಲ್ಲ. 40 ಪ್ರತಿಶತಕ್ಕೂ ಕಡಿಮೆ ಸಂತ್ರಸ್ತರು ಬಾಲ್ಯದ ದಿನಗಳಲ್ಲಿ ಕಿರುಕುಳಕ್ಕೆ ಒಳಗಾಗಿರ್ತಾರೆ. ಆಸ್ಟ್ರೇಲಿಯಾದ ರಾಯಲ್​ ಕಮಿಷನ್​​ ಹೇಳುವಂತೆ ಮಹಿಳೆಯರಿಗೆ 20 ವರ್ಷ ಹಾಗೂ ಪುರುಷರು 25ವರ್ಷವಾಗುವರೆಗೂ ಕಿರುಕುಳವನ್ನ ಅನುಭವಿಸ್ತಾರೆ. ಆದರೆ ಕೆಲವರು ಇದನ್ನ ಬಹಿರಂಗ ಮಾಡಲು ಇಚ್ಚಿಸೋದಿಲ್ಲ ಎಂದು ಹೇಳಿದೆ.

ಹತ್ತರಲ್ಲಿ ಒಂದು ಮಗು 18 ವರ್ಷದ ಒಳಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತದೆ. ಈ ಪ್ರಮಾಣವು 7ರಲ್ಲಿ ಒಂದು ಹೆಣ್ಣು ಮಗು (14%) ಹಾಗೂ 25 ಬಾಲಕರಲ್ಲಿ ಒಬ್ಬ (4%) ಆಗಿದೆ.

ಲೈಂಗಿಕ ದೌರ್ಜನ್ಯ ನಡೆಸುವವರು ಸಾಮಾನ್ಯವಾಗಿ ಮಕ್ಕಳಿಗೆ ತುಂಬಾ ಪರಿಚಯ ಇರುವವರು ಇಲ್ಲವೇ ಪೋಷಕರೇ ಆಗಿದ್ದಾರೆ. ಅಥವಾ ಸಂಬಂಧಿಕರಿಂದಲೇ ಲೈಂಗಿಕ ದೌರ್ಜನ್ಯ ಉಂಟಾಗುತ್ತದೆ. 15 %ಕ್ಕಿಂತಲೂ ಕಡಿಮೆ ಪ್ರಮಾಣದ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರು ಅಪರಿಚಿತರಾಗಿದ್ದಾರೆ.

ಅಮೆರಿಕದ ಬ್ಯುರೋವೊಂದು ನಡೆಸಿದ ಅಧ್ಯಯನದ ಪ್ರಕಾರ 17 ವರ್ಷದ ಒಳಗಿನ 7.5 ಪ್ರತಿಶತ ಯುವತಿಯರು ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಾಗಿದ್ದಾರೆ. ಹಾಗೂ 5 ಪ್ರತಿಶತ ಯುವಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ್ತಾರೆ. 2016ರಲ್ಲಿ ಆಸ್ಟ್ರೆಲಿಯಾ ಬ್ಯೂರೋ ನಡೆಸಿದ ಅಧ್ಯಯನದ ಪ್ರಕಾರ ಅಪರಿಚಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ 16 ವರ್ಷದ ಒಳಗಿನ 11.5 % ಬಾಲಕಿಯರು ಹಾಗೂ 15 % ಬಾಲಕರು ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...