
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ವ್ಯಕ್ತಿ ಭಯಪಟ್ಟ ರೀತಿ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ.
ಪಿಪಿಇ ಕಿಟ್ ಧರಿಸಿದ ಆರೋಗ್ಯ ಸಿಬ್ಬಂದಿ ಖುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯ ತೋಳಿಗೆ ಇಂಜೆಕ್ಷನ್ ಚುಚ್ಚಲು ಮುಂದಾಗುತ್ತಾರೆ. ಆದರೆ ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕಾಗಿದ್ದ ವ್ಯಕ್ತಿ ಅದೆಷ್ಟು ಭಯಗೊಂಡಿದ್ದ ಅಂದ್ರೆ ಆತ ಕುರ್ಚಿಯಿಂದಲೇ ಕೆಳಗೆ ಬೀಳುವಷ್ಟರ ಮಟ್ಟಿಗೆ ಹೋಗುತ್ತಾನೆ. ಅಲ್ಲೇ ಇದ್ದ ಇನ್ನೊಬ್ಬ ಸಿಬ್ಬಂದಿ ಆತನಿಗೆ ಧೈರ್ಯ ತುಂಬಲು ಯತ್ನಿಸುತ್ತಾರೆ.
ಬೇರೆ ಕಡೆ ನೋಡುವಂತೆ, ಕಣ್ಮುಚ್ಚಿಕೊಳ್ಳುವಂತೆ ಆತನಿಗೆ ಸಲಹೆಗಳನ್ನ ನೀಡಲಾಗುತ್ತೆ. ಕೊನೆಗೂ ಇಂಜೆಕ್ಷನ್ ಕೊಡುವ ವೇಳೆ ಆತ ಜೋರಾಗಿ ಕಿರುಚಿಕೊಳ್ತಾನೆ. ಇದನ್ನೆಲ್ಲ ನೋಡ್ತಿದ್ರೆ ಆತ ಸೂಜಿಗೆ ಎಷ್ಟು ಹೆದರುತ್ತಾನೆ ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತೆ. ಅಂದಹಾಗೆ ನಿಮಗೂ ಇಂಜೆಕ್ಷನ್ ಅಂದರೆ ಇಷ್ಟೇ ಭಯಾನಾ..?