
ನಿವಾರ್ ಚಂಡಮಾರುತದಿಂದ ಉಂಟಾದ ಹಾನಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂದು ವಿಡಿಯೋದಲ್ಲಂತು ಜನನಿಬಿಡದ ಪ್ರದೇಶದಲ್ಲಿ ಗಾಳಿ ಮಳೆಯ ರಭಸಕ್ಕೆ ಫ್ಲೆಕ್ಸ್ ಒಂದು ಧರಾಶಾಹಿಯಾಗಿದೆ.
ಇದು ಧರಾಶಾಹಿಯಾಗುವ ವೇಳೆ ಇಬ್ಬರು ಬೈಕ್ ಸವಾರರಿಗೆ ಬಂದು ಬಡಿದಿದೆ. ಈ ವಿಡಿಯೋ ಚೆನ್ನೈನಲ್ಲಿ ನಡೆದ ಅವಘಡ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಫ್ಯಾಕ್ಟ್ ಚೆಕ್ ವೇಳೆ ಈ ವಿಡಿಯೋ ಚೆನ್ನೈನದ್ದಲ್ಲ ಬದಲಾಗಿ ಪಾಕಿಸ್ತಾನದ ಹಳೆಯ ವಿಡಿಯೋ ಎಂಬ ಸತ್ಯ ಬಯಲಾಗಿದೆ. ಈ ವಿಡಿಯೋ ಆಗಸ್ಟ್ನಲ್ಲಿ ಮೊದಲ ಬಾರಿಗೆ ಪೋಸ್ಟ್ ಮಾಡಲಾಗಿದೆ.