alex Certify ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್‌ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲೆಳೆಯಲ್ಲಿ ಡೆಡ್ಲಿ ಸ್ನೇಕ್‌ ಕಡಿತದಿಂದ ಬಚಾವಾದ ಉರಗ ತಜ್ಞ: ಬೆಚ್ಚಿಬೀಳಿಸುವಂತಿದೆ ವಿಡಿಯೋ

ಕ್ಯಾಲಿಫೋರ್ನಿಯಾದಲ್ಲಿ ಸರಿಸೃಪಗಳ ಮೃಗಾಲಯ ನಡೆಸುತ್ತಿದ್ದ ಜೇಯ್​​ ಬ್ರೀವರ್​​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಾವಿನ ಜೊತೆಗಿರುವ ವಿಡಿಯೋವೊಂದನ್ನ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

ಕೆಲ ದಿನಗಳ ಹಿಂದಷ್ಟೇ ಈ ಘಟನೆ ನಡೆದಿದ್ದು, ಕೋಪದಲ್ಲಿದ್ದ ಹಾವು ಇನ್ನೇನು ಜೇಯ್​ರ ಮುಖಕ್ಕೆ ಕಚ್ಚೇ ಬಿಡ್ತು ಅನ್ನೋವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಜೇಯ್​ ಪಾರಾಗಿದ್ದಾರೆ.

ಮಾರ್ಚ್‌ 21 ರಂದು ಭೂಮಿ ಸಮೀಪ ಹಾದುಹೋಗಲಿದೆ ಅತಿ ದೊಡ್ಡ ಕ್ಷುದ್ರಗ್ರಹ

ಬ್ರೀವರ್​ ಸಾಮಾನ್ಯವಾಗಿ ಹಾವಿನ ಜೊತೆಗಿರುವ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಹೊಸ ವಿಡಿಯೋವನ್ನ ಬ್ರೀವರ್​ ಶೇರ್​ ಮಾಡಿದ್ದು ಕೂದಲೆಳೆ ಅಂತರದಲ್ಲಿ ಹಾವಿನ ಕಡಿತದಿಂದ ಪಾರಾದ ಬ್ರೀವರ್​ ಸಮಯಪ್ರಜ್ಞೆ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಅಂದಹಾಗೆ ಈ ಘಟನೆ ಬ್ರೀವರ್​ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಇದ್ದಾಗಲೇ ನಡೆದಿದ್ದು ಸಾಕಷ್ಟು ಫಾಲೋವರ್ಸ್​ ಲೈವ್​​ನಲ್ಲೇ ಈ ಡೆಡ್ಲಿ ಘಟನೆಯನ್ನ ಕಂಡಿದ್ದಾರೆ. ಈ ಘಟನೆ ಬಳಿಕ ಮಾತನಾಡಿದ ಬ್ರೀವರ್​, ವ್ಹಾವ್​..! ನಾನು ಆಕೆಯನ್ನ ನೋಡೋದು ನಿಲ್ಲಿಸುತ್ತಿದ್ದಂತೆಯೇ ಹೀಗೆ ಮಾಡಿದ್ದಾಳೆ. ಈ ಹಾವು ಎಷ್ಟು ಸ್ಮಾರ್ಟ್​ ಇದೆ ನೋಡಿ ಎಂದು ಹೇಳಿದ್ದಾರೆ .

https://www.instagram.com/p/CMZq-XJFmvj/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...