alex Certify BIG NEWS: ಮಾರ್ಚ್‌ 21 ರಂದು ಭೂಮಿ ಸಮೀಪ ಹಾದುಹೋಗಲಿದೆ ಅತಿ ದೊಡ್ಡ ಕ್ಷುದ್ರಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರ್ಚ್‌ 21 ರಂದು ಭೂಮಿ ಸಮೀಪ ಹಾದುಹೋಗಲಿದೆ ಅತಿ ದೊಡ್ಡ ಕ್ಷುದ್ರಗ್ರಹ

ಅತ್ಯಂತ ದೊಡ್ಡ ಕ್ಷುದ್ರಗ್ರಹ ಮಾರ್ಚ್ 21ರಂದು ಭೂಮಿಯಿಂದ ಅತ್ಯಂತ ಸನಿಹದಲ್ಲಿ ಅಂದರೆ 2 ಮಿಲಿಯನ್​ ಕಿಲೋಮೀಟರ್​​​ ದೂರದಿಂದ ಹಾದುಹೋಗಲಿದೆ ಎಂದು ನಾಸಾ ಮಾಹಿತಿ ನೀಡಿದೆ.

2001 ಎಫ್​ಓ32 ಎಂಬ ಹೆಸರಿನ ಈ ಆಸ್ಟೆರಾಯ್ಡ್​​​ನ್ನು 20 ವರ್ಷಗಳ ಹಿಂದೆಯೇ ಕಂಡು ಹಿಡಿಯಲಾಗಿದೆ ಎಂದು ನಾಸಾ ಹೇಳಿದೆ. ಈ ಕ್ಷುದ್ರಗ್ರಹ 3000 ಅಡಿ ವ್ಯಾಸ ಹೊಂದಿದೆ.

ಸೂರ್ಯನ ಸುತ್ತ 2001ಎಫ್​ಒ 32ರ ಕಕ್ಷೆಯ ಹಾದಿಯನ್ನ ನಾವು ನಿಖರವಾಗಿ ತಿಳಿದಿದ್ದೇವೆ ಎಂದು ಸೆಂಟರ್​ ಫಾರ್​ ನಿಯರ್​ ಅರ್ಥ್​ ಸ್ಟಡೀಸ್​ ನಿರ್ದೇಶಕ ಪಾಲ್​ ಚೋಡಾಸ್​ ಮಾಹಿತಿ ನೀಡಿದ್ದಾರೆ.

ವಿಲೀನಗೊಂಡ ಬ್ಯಾಂಕುಗಳ ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ

ಉಳಿದೆಲ್ಲ ಕ್ಷುದ್ರಗ್ರಹಗಳು ಭೂಮಿಯನ್ನ ಎದುರಿಸುವ ವೇಗಕ್ಕಿಂತ 2001ಎಫ್​ಓ 32 ಗಂಟೆಗೆ ಸುಮಾರು 77 ಸಾವಿರ ಮೈಲಿ ವೇಗದಲ್ಲಿ ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.

ಪ್ರಸ್ತುತ ಈ ವಸ್ತುವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಹೀಗಾಗಿ ಈ ಕ್ಷುದ್ರಗ್ರಹದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ನಮಗಿದು ಸೂಕ್ತ ಅವಕಾಶವಾಗಿದೆ ಎಂದು ನಾಸಾ ಜೆಟ್​ ಪ್ರೊಲಲ್ಷನ್​​ ಪ್ರಯೋಗಾಲಯದ ಪ್ರಧಾನ ವಿಜ್ಞಾನಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...