ಐರ್ಲೆಂಡ್ನ ಅಧ್ಯಕ್ಷ ಸುದ್ದಿ ವಾಹಿನಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರ ಪ್ರೀತಿಯ ಶ್ವಾನಗಳು ಅಡ್ಡಿಪಡಿಸಿದ್ದು ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಧ್ಯಕ್ಷ ಮೈಕೆಲ್ ಡಿ ಹಿಗ್ಗಿನ್ಸ್ ಅಗಲಿದ ನಟ ಟಾಮ್ ಹಿಕ್ಕಿ ಬಗ್ಗೆ ಸುದ್ದಿ ವಾಹಿನಿಯ ಎದುರು ಸಂತಾಪ ವ್ಯಕ್ತಪಡಿಸುತ್ತಿದ್ದರು. ಈ ವೇಳೆಯಲ್ಲಿ ಅವರು ಸಾಕಿದ್ದ ಎರಡು ಶ್ವಾನಗಳು ಒಂದು ಶ್ವಾನ ಅಧ್ಯಕ್ಷರ ಬಳಿ ಬಂದು ಆಟವಾಡುವಂತೆ ಮುದ್ದಾಗಿ ಮನವಿ ಮಾಡಿದೆ.
7 ತಿಂಗಳು ಪ್ರಾಯದ ನಾಯಿಯು ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ. ಅಧ್ಯಕ್ಷರ ಬಳಿ ಬಂದ ಶ್ವಾನವು ಅವರ ಕೈಯನ್ನ ಹಿಡಿದುಕೊಂಡು ತನ್ನತ್ತ ಗಮನ ಸೆಳೆಯಲು ಮುಗ್ಧ ಪ್ರಯತ್ನ ಮಾಡಿದೆ. ಇಷ್ಟಾದ್ರೂ ಸಹ ಮೈಕೆಲ್ ಸುದ್ದಿಗೋಷ್ಠಿಯತ್ತಲೇ ಗಮನ ಹರಿಸಿದ್ದರು. ಇದೇ ವೇಳೆಯಲ್ಲಿ ಶ್ವಾನಕ್ಕೆ ತಮ್ಮ ಕೈಯನ್ನ ನೀಡಿ ಆಟವಾಡಿದ್ದಾರೆ.
ಹೈಕೋರ್ಟ್ ಆದೇಶಕ್ಕೂ ಒಪ್ಪದ ಕೇಂದ್ರ; 1200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಸಾಧ್ಯವಿಲ್ಲ ಎಂದ ಸರ್ಕಾರ
ಈ ವಿಡಿಯೋವನ್ನ ಅಧ್ಯಕ್ಷರ ಅಧಿಕೃತ ಟಿಕ್ಟಾಕ್ ಪೇಜ್ನಲ್ಲಿ ಹರಿಬಿಡಲಾಗಿದ್ದು ಸಖತ್ ವೈರಲ್ ಆಗಿದೆ. ಬಳಿಕ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡಿದೆ.