alex Certify ಐರಿಷ್​ ಅಧ್ಯಕ್ಷರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಶ್ವಾನ..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐರಿಷ್​ ಅಧ್ಯಕ್ಷರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಶ್ವಾನ..! ಮುಂದೇನಾಯ್ತು ನೋಡಿ

ಐರ್ಲೆಂಡ್​​ನ ಅಧ್ಯಕ್ಷ ಸುದ್ದಿ ವಾಹಿನಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರ ಪ್ರೀತಿಯ ಶ್ವಾನಗಳು ಅಡ್ಡಿಪಡಿಸಿದ್ದು ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಧ್ಯಕ್ಷ ಮೈಕೆಲ್​​ ಡಿ ಹಿಗ್ಗಿನ್ಸ್ ಅಗಲಿದ ನಟ ಟಾಮ್​ ಹಿಕ್ಕಿ ಬಗ್ಗೆ ಸುದ್ದಿ ವಾಹಿನಿಯ ಎದುರು ಸಂತಾಪ ವ್ಯಕ್ತಪಡಿಸುತ್ತಿದ್ದರು. ಈ ವೇಳೆಯಲ್ಲಿ ಅವರು ಸಾಕಿದ್ದ ಎರಡು ಶ್ವಾನಗಳು ಒಂದು ಶ್ವಾನ ಅಧ್ಯಕ್ಷರ ಬಳಿ ಬಂದು ಆಟವಾಡುವಂತೆ ಮುದ್ದಾಗಿ ಮನವಿ ಮಾಡಿದೆ.

7 ತಿಂಗಳು ಪ್ರಾಯದ ನಾಯಿಯು ಈ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಾಗಿದೆ. ಅಧ್ಯಕ್ಷರ ಬಳಿ ಬಂದ ಶ್ವಾನವು ಅವರ ಕೈಯನ್ನ ಹಿಡಿದುಕೊಂಡು ತನ್ನತ್ತ ಗಮನ ಸೆಳೆಯಲು ಮುಗ್ಧ ಪ್ರಯತ್ನ ಮಾಡಿದೆ. ಇಷ್ಟಾದ್ರೂ ಸಹ ಮೈಕೆಲ್​ ಸುದ್ದಿಗೋಷ್ಠಿಯತ್ತಲೇ ಗಮನ ಹರಿಸಿದ್ದರು. ಇದೇ ವೇಳೆಯಲ್ಲಿ ಶ್ವಾನಕ್ಕೆ ತಮ್ಮ ಕೈಯನ್ನ ನೀಡಿ ಆಟವಾಡಿದ್ದಾರೆ.

ಹೈಕೋರ್ಟ್ ಆದೇಶಕ್ಕೂ ಒಪ್ಪದ ಕೇಂದ್ರ; 1200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಸಾಧ್ಯವಿಲ್ಲ ಎಂದ ಸರ್ಕಾರ

ಈ ವಿಡಿಯೋವನ್ನ ಅಧ್ಯಕ್ಷರ ಅಧಿಕೃತ ಟಿಕ್​ಟಾಕ್​ ಪೇಜ್​ನಲ್ಲಿ ಹರಿಬಿಡಲಾಗಿದ್ದು ಸಖತ್​ ವೈರಲ್​ ಆಗಿದೆ. ಬಳಿಕ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಈ ವಿಡಿಯೋ ಸಖತ್​ ಸದ್ದು ಮಾಡಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...