ಚೀನಾದ ಮೃಗಾಲಯವೊಂದರಲ್ಲಿ ನಾಯಿಯನ್ನ ತೋಳದ ರೀತಿಯಲ್ಲಿ ಬಿಂಬಿಸಿದ ವಿಚಿತ್ರ ಘಟನೆ ನಡೆದಿದೆ. ಮೃಗಾಲಯದಲ್ಲಿ ತೋಳದ ಬೋರ್ಡ್ ಹಾಕಿರುವ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಚೀನಾ ಕೇಂದ್ರ ಭಾಗದ ಹುಬೇ ಪ್ರಾಂತ್ಯದ ಕ್ಸಿಯಾನಿಂಗ್ ನಗರದಲ್ಲಿರುವ ಕ್ಸಿಯಾಂಗ್ವುಶನ್ ಎಂಬ ಮೃಗಾಲಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ವಿಡಿಯೋದ ಸಣ್ಣ ತುಣುಕೊಂದರಲ್ಲಿ ಮೃಗಾಲಯಕ್ಕೆ ಬಂದ ಪ್ರವಾಸಿಗರೊಬ್ಬರು ತೋಳ ಎಂಬ ಬೋರ್ಡ್ನ ಹೊಂದಿದ್ದ ಬೋನಿನ ಕಡೆ ಬರುತ್ತಾರೆ. ಆದರೆ ಅದರೊಳಗೆ ರಾಟ್ವಿಲ್ಲರ್ ತಳಿಯ ಶ್ವಾನ ಇರೋದನ್ನ ಗಮನಿಸಿದ ಪ್ರವಾಸಿಗ ತೋಳ..! ನೀನು ನಿಜವಾಗಿಯೂ ತೋಳವೇ..? ಎಂದು ಶ್ವಾನದ ಬಳಿಯೇ ಪ್ರಶ್ನೆ ಮಾಡಿದ್ದಾನೆ.
ಈ ವಿಡಿಯೋ ಚೀನಾದ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ವೈರಲ್ ಆಗಿದೆ. ಕೊರೊನಾ ಬಳಿಕ ಮೃಗಾಲಯದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.
ಅತ್ಯಂತ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆ ಸೌಲಭ್ಯ ಒದಗಿಸಿದೆ ಈ ಏರ್ಲೈನ್ ಕಂಪನಿ….!
ಈ ಬೋನಿನಲ್ಲಿ ಮೊದಲು ತೋಳವೇ ಇತ್ತು. ಆದರೆ ಅದಕ್ಕೆ ವಯಸ್ಸಾದ್ದರಿಂದ ಕೆಲ ತಿಂಗಳ ಹಿಂದೆ ಸಾವನ್ನಪ್ಪಿದೆ. ಹೀಗಾಗಿ ತಾತ್ಕಾಲಿಕವಾಗಿ ಈ ಜಾಗದಲ್ಲಿ ಶ್ವಾನವನ್ನ ಇಡಲಾಗಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.
ಈ ಮೃಗಾಲಯದಲ್ಲಿ ಪ್ರತಿಯೊಬ್ಬ ಪ್ರವಾಸಿಗನಿಗೆ 168 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಈ ರೀತಿ ಶ್ವಾನವನ್ನ ಬೇರೆ ಪ್ರಾಣಿಗಳಿಗೆ ಹೋಲಿಸಿರುವ ಚೀನಾದ ಈ ಬುದ್ಧಿ ಇದೇ ಮೊದಲೇನಲ್ಲ. 2018ರಲ್ಲೂ ಯುಹೆ ಮೃಗಾಲಯದಲ್ಲಿ ಸೈಬೆರಿಯನ್ ಹುಲಿಗಳ ಜಾಗದಲ್ಲಿ ಶ್ವಾನಗಳನ್ನ ಇಡಲಾಗಿತ್ತು.
https://youtu.be/JxLkLiUGC5U