alex Certify ಅತ್ಯಂತ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆ ಸೌಲಭ್ಯ ಒದಗಿಸಿದೆ ಈ ಏರ್​ಲೈನ್​ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ಕಡಿಮೆ ದರದಲ್ಲಿ ಕೊರೊನಾ ಪರೀಕ್ಷೆ ಸೌಲಭ್ಯ ಒದಗಿಸಿದೆ ಈ ಏರ್​ಲೈನ್​ ಕಂಪನಿ….!

ಸ್ಪೈಸ್​ ಜೆಟ್​ ಗುರುವಾರ ತನ್ನ ಹೆಲ್ತ್​ಕೇರ್​ ಕಂಪನಿ ಸ್ಪೈಸ್​ ಹೆಲ್ತ್​ ಮೂಲಕ ಜನರಿಗಾಗಿ ಅತಿ ಕಡಿಮೆ ಬೆಲೆಯ ಅಂದರೆ ಕೇವಲ 499 ರೂಪಾಯಿಗೆ ಕೊರೊನಾ ಟೆಸ್ಟಿಂಗ್​ ಸೇವೆಯನ್ನ ದೇಶದಲ್ಲಿ ನೀಡ್ತಿದೆ. ಇದರ ಜೊತೆಯಲ್ಲಿ ಸ್ಪೈಸ್​ಜೆಟ್​ ಪ್ರಯಾಣಿಕರಿಗೆ ಕೇವಲ 299 ರೂಪಾಯಿಗೆ ಕೋವಿಡ್​ ಟೆಸ್ಟ್ ಮಾಡುವ ಆಫರ್​ ನೀಡಿದೆ. ಇದರಿಂದಾಗಿ ಸ್ಪೈಸ್​ಜೆಟ್​ ಪ್ರಯಾಣಿಕರು 299 ರೂಪಾಯಿ ಮೌಲ್ಯದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ.

ಇಲ್ಲಿಯವರೆಗೆ ಸ್ಪೈಸ್​ಹೆಲ್ತ್​​ ಕೊರೊನಾ ಪರೀಕ್ಷೆ ವಿಚಾರದಲ್ಲಿ ವಿಭಿನ್ನ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಆರೋಗ್ಯ ಇಲಾಖೆಯ ಜೊತೆ ಕೆಲಸ ಮಾಡಿದೆ. ಇದರ ಮೊಬೈಲ್​ ಲ್ಯಾಬ್​​ಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಕೂಡ ಸಿಕ್ಕಿದೆ.

ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪ

ಮೊದಲ ಹಂತವಾಗಿ ಸ್ಪೈಸ್​ ಹೆಲ್ತ್​ ಮುಂಬಯಿ ಹಾಗೂ ದೆಹಲಿಯ ಜನರಿಗಾಗಿ ಪರೀಕ್ಷಾಲಯಗಳನ್ನ ಆರಂಭಿಸಿದೆ. ಇಲ್ಲಿ ಗ್ರಾಹಕರು ಮನೆಯಿಂದಲೇ ಸ್ಯಾಂಪಲ್​​ಗಳನ್ನ ಸಂಗ್ರಹಿಸಿ ಪರೀಕ್ಷೆಗೆ ತಂದುಕೊಡಬಹುದಾಗಿದೆ. ಗ್ರಾಹಕರು www.spicehealth.comನ ಮೂಲಕ ಅಪಾಯಿಂಟ್​ಮೆಂಟ್​ ಬುಕ್​ ಮಾಡಿ ಹತ್ತಿರದ ಸ್ಪೈಸ್​ಹೆಲ್ತ್​ ಮೊಬೈಲ್​ ಲ್ಯಾಬ್​​ನಲ್ಲಿ ಪರೀಕ್ಷೆ ಮಾಡಬಹುದಾಗಿದೆ. ಇದೇ ರೀತಿ ಸ್ಪೈಸ್​ಜೆಟ್​ನ ಪ್ರಯಾಣಿಕರು ತಮ್ಮ ಪಿಎನ್​ಆರ್​ ಸಂಖ್ಯೆಯನ್ನ ಉಲ್ಲೇಖಿಸಿ ವೆಬ್​ಸೈಟ್​​ನಲ್ಲಿ ಆರ್​ಟಿ – ಪಿಸಿಆರ್​ ಪರೀಕ್ಷೆಗೆ ಬುಕ್ಕಿಂಗ್​ ಮಾಡಬಹುದಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಪೈಸ್​ ಹೆಲ್ತ್​​ ಸಿಇಓ ಅವನಿ ಸಿನ್ಹಾ, ದೆಹಲಿ, ಮಹಾರಾಷ್ಟ್ರ, ಹರಿಯಾಣ ಹಾಗೂ ಹರಿದ್ವಾರದಲ್ಲಿ 1 ಲಕ್ಷಕ್ಕೂ ಅಧಿಕ ಜನರಿಗೆ ಪರೀಕ್ಷೆ ನಡೆಸಿದ ಬಳಿಕ ಹಾಗೂ ಸರ್ಕಾರದ ಜೊತೆ ಸೇರಿ ಕೆಲಸ ಮಾಡಿದ ಬಳಿಕ ಕಡಿಮೆ ದರದಲ್ಲಿ ಜನರಿಗೆ ಆರ್​​ಟಿ – ಪಿಸಿಆರ್​​ ಟೆಸ್ಟಿಂಗ್​ ಸೌಕರ್ಯ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...