
ವಾಷಿಂಗ್ಟನ್ ಡಿಸಿಯ ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದು, ಎರಡು ಮುದ್ದಾದ ಪಾಂಡಾಗಳು ಹಿಮಪಾತವಾದ ಪ್ರದೇಶದಲ್ಲಿ ಆಡುತ್ತಿರುವ ದೃಶ್ಯ ಕಂಡು ನೆಟ್ಟಿಗರು ಖುಶ್ ಆಗಿದ್ದಾರೆ.
51 ಸೆಕೆಂಡ್ಗಳ ತುಣುಕಿನಲ್ಲಿ ಮೆ ಕ್ಸಿಯಾಂಗ್ ಹಾಗೂ ಟಿಯಾನ್ ಟಿಯಾನ್ ಅಂಗಾತ ಮಲಗಿ ಜಾರು ಬಂಡಿಯಂತೆ ಹಿಮದ ಮೇಲೆ ಆಟವಾಡಿವೆ. ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೇ ಲೈಕ್ಸ್ ಸಂಪಾದಿಸಿದೆ.