ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು.
ಮಿಸನ್ ಹ್ಯಾರಿಮನ್ ಕ್ಲಿಕ್ ಮಾಡಿದ ಈ ಚಿತ್ರದಲ್ಲಿರುವ ಯುವತಿ, “Why Is Ending Racism a Debate?” (ಜನಾಂಗೀಯ ದ್ವೇಷ ಅಂತ್ಯಗೊಳಿಸಲು ಚರ್ಚೆ ಏಕೆ?) ಎಂಬ ಪ್ಲಾಕಾರ್ಡ್ ಹಿಡಿದು ನಿಂತಿದ್ದರೆ ಆಕೆಯ ಹಿಂದೆ ಇರುವ ವ್ಯಕ್ತಿಯೊಬ್ಬರು ಇದಕ್ಕೆ ಬೆಂಬಲ ಕೊಡುತ್ತಾ ಮುಷ್ಠಿಯನ್ನು ಏರಿಸಿದಂತೆ ಕಾಣುತ್ತಿದೆ.
ಈ ಚಿತ್ರವನ್ನು ಹರಾಜಿನಲ್ಲಿ 2.8 ಲಕ್ಷದಿಂದ 4.7 ಲಕ್ಷ ರೂ.ಗಳವರೆಗೆ ಬೆಲೆ ಕೊಟ್ಟು ಮಾರಾಟ ಮಾಡುವ ಸಾಧ್ಯತೆ ಇದೆ. ಈ ಸೇಲ್‌ನಲ್ಲಿ ಬಂದ ದುಡ್ಡನ್ನು ರಕ್ತ ಕ್ಯಾನ್ಸರ್ ಪೀಡಿತರ ನೆರವಿಗೆ ನೀಡಲಾಗುವುದಂತೆ. ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯ ಕೊಲೆಗೆ ಪೊಲೀಸರು ಕಾರಣರಾದ ಬಳಿಕ ಈ ಅಭಿಯಾನ ದೊಡ್ಡದಾಗಿ ಜರುಗಿತ್ತು.