alex Certify ಈ ಮೂಲಕ ಕಾಣಿಸುತ್ತೆ ನೀವು ಹಿಂದೆಂದೂ ಕಂಡಿರದ ಬಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮೂಲಕ ಕಾಣಿಸುತ್ತೆ ನೀವು ಹಿಂದೆಂದೂ ಕಂಡಿರದ ಬಣ್ಣ

ಮಾನವನ ಕಣ್ಣು ಸೂಕ್ಷ್ಮ ವಸ್ತುಗಳನ್ನ ಗುರುತಿಸುವ ಸಾಮರ್ಥ್ಯವನ್ನ ಹೊಂದಿದ್ದರೂ ಸಹ ಕೆಲವೊಂದು ಬಾರಿ ಕಣ್ಣಿಗೆ ಮೋಸ ಮಾಡುವಂತಹ ವಿಲಕ್ಷಣ ದೃಶ್ಯಗಳನ್ನೂ ಕಂಡಿರುತ್ತೇವೆ.

ಟ್ರೂ ಸಯಾನ್​ ಎಂಬ ಹಸಿರು ಹಾಗೂ ನೀಲಿ ಮಿಶ್ರಿತ ಬಣ್ಣವನ್ನ ಟಿವಿ ಪರದೆಗಳಲ್ಲಿ ಸೆರೆ ಹಿಡಿಯೋದು ಕಷ್ಟ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್​ ಮಾಡಲಾದ ಆಪ್ಟಿಕಲ್​ ಇಲ್ಯೂಶನ್​ ವಿಡಿಯೋವೊಂದು ಈ ಬಣ್ಣವನ್ನ ತೋರಿಸಿದ್ದು ನೆಟ್ಟಿಗರು ಬೆರಗಾಗಿದ್ದಾರೆ.

ಟಿಕ್​ ಟಾಕ್​ ಬಳಕೆದಾರರಾದ ಕೇಟ್​ ಬ್ಯಾಕೋನ್​ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಇದೊಂದು ಟ್ರೂ ಸಯಾನ್​ ಬಣ್ಣವಾಗಿದ್ದು ಟಿವಿ ಹಾಗೂ ಮಾನಿಟರ್​ಗಳಲ್ಲಿ ಸಾಮಾನ್ಯವಾಗಿ ಈ ಬಣ್ಣ ಕಾಣಸಿಗೋದಿಲ್ಲ ಎಂದು ಹೇಳಿದ್ದಾರೆ.

ʼಬೆಸ್ಟ್ʼ ಕಂಪನಿ ಸಿಬ್ಬಂದಿಗೆ ನಾಣ್ಯ ರೂಪದಲ್ಲಿ ಸಿಗ್ತಿದೆ ಸಂಬಳ

ಈ ವಿಡಿಯೋದಲ್ಲಿ ವೀಕ್ಷಕರಿಗೆ ಕೆಂಪು ಬಣ್ಣದ ವೃತ್ತದ ಒಳಗಿರುವ ಬಿಳಿ ಬಣ್ಣದ ಡಾಟ್​ನ್ನು ನೋಡುವಂತೆ ಹೇಳಲಾಗುತ್ತೆ. ಸುಮಾರು 30 ಸೆಕೆಂಡ್​ಗಳ ಕಾಲ ಬಿಳಿ ಬಣ್ಣವನ್ನೇ ನೋಡುತ್ತಿರಬೇಕು. ಇದಾದ ಬಳಿಕ ನಿಮ್ಮ ಕಣ್ಣನ್ನ ನಿಧಾನವಾಗಿ ಸ್ವಲ್ಪೇ ಸ್ವಲ್ಪ ಮುಚ್ಚಿದ್ರೆ ನಿಮಗೆ ಈ ವಿಶೇಷ ಬಣ್ಣ ಕಾಣಲಿದೆ. ಈ ಆಪ್ಟಿಕಲ್​ ಇಲ್ಯೂಶನ್​ ವಿಡಿಯೋ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...