ಮಾನವನ ಕಣ್ಣು ಸೂಕ್ಷ್ಮ ವಸ್ತುಗಳನ್ನ ಗುರುತಿಸುವ ಸಾಮರ್ಥ್ಯವನ್ನ ಹೊಂದಿದ್ದರೂ ಸಹ ಕೆಲವೊಂದು ಬಾರಿ ಕಣ್ಣಿಗೆ ಮೋಸ ಮಾಡುವಂತಹ ವಿಲಕ್ಷಣ ದೃಶ್ಯಗಳನ್ನೂ ಕಂಡಿರುತ್ತೇವೆ.
ಟ್ರೂ ಸಯಾನ್ ಎಂಬ ಹಸಿರು ಹಾಗೂ ನೀಲಿ ಮಿಶ್ರಿತ ಬಣ್ಣವನ್ನ ಟಿವಿ ಪರದೆಗಳಲ್ಲಿ ಸೆರೆ ಹಿಡಿಯೋದು ಕಷ್ಟ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾದ ಆಪ್ಟಿಕಲ್ ಇಲ್ಯೂಶನ್ ವಿಡಿಯೋವೊಂದು ಈ ಬಣ್ಣವನ್ನ ತೋರಿಸಿದ್ದು ನೆಟ್ಟಿಗರು ಬೆರಗಾಗಿದ್ದಾರೆ.
ಟಿಕ್ ಟಾಕ್ ಬಳಕೆದಾರರಾದ ಕೇಟ್ ಬ್ಯಾಕೋನ್ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಇದೊಂದು ಟ್ರೂ ಸಯಾನ್ ಬಣ್ಣವಾಗಿದ್ದು ಟಿವಿ ಹಾಗೂ ಮಾನಿಟರ್ಗಳಲ್ಲಿ ಸಾಮಾನ್ಯವಾಗಿ ಈ ಬಣ್ಣ ಕಾಣಸಿಗೋದಿಲ್ಲ ಎಂದು ಹೇಳಿದ್ದಾರೆ.
ʼಬೆಸ್ಟ್ʼ ಕಂಪನಿ ಸಿಬ್ಬಂದಿಗೆ ನಾಣ್ಯ ರೂಪದಲ್ಲಿ ಸಿಗ್ತಿದೆ ಸಂಬಳ
ಈ ವಿಡಿಯೋದಲ್ಲಿ ವೀಕ್ಷಕರಿಗೆ ಕೆಂಪು ಬಣ್ಣದ ವೃತ್ತದ ಒಳಗಿರುವ ಬಿಳಿ ಬಣ್ಣದ ಡಾಟ್ನ್ನು ನೋಡುವಂತೆ ಹೇಳಲಾಗುತ್ತೆ. ಸುಮಾರು 30 ಸೆಕೆಂಡ್ಗಳ ಕಾಲ ಬಿಳಿ ಬಣ್ಣವನ್ನೇ ನೋಡುತ್ತಿರಬೇಕು. ಇದಾದ ಬಳಿಕ ನಿಮ್ಮ ಕಣ್ಣನ್ನ ನಿಧಾನವಾಗಿ ಸ್ವಲ್ಪೇ ಸ್ವಲ್ಪ ಮುಚ್ಚಿದ್ರೆ ನಿಮಗೆ ಈ ವಿಶೇಷ ಬಣ್ಣ ಕಾಣಲಿದೆ. ಈ ಆಪ್ಟಿಕಲ್ ಇಲ್ಯೂಶನ್ ವಿಡಿಯೋ ಸಖತ್ ವೈರಲ್ ಆಗಿದೆ.