alex Certify ಕಾರ್ಡ್‌ ಬೋರ್ಡ್‌ ಕಾರು ಏರಿ ಬಂದ ಅಮ್ಮ – ಮಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಡ್‌ ಬೋರ್ಡ್‌ ಕಾರು ಏರಿ ಬಂದ ಅಮ್ಮ – ಮಗಳು…!

ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಹಲವು ನಿಯಮಗಳು ಜಾರಿಗೆ ಬಂದಿವೆ. ಮೆಕ್ ಡೊನಾಲ್ಡ್ ಬೆಲ್ಜಿಯಂನಲ್ಲಿ ಡ್ರೈವ್ ಥ್ರೂ ಗ್ರಾಹಕರಿಗೆ ಮಾತ್ರ ಸೇವೆ ನೀಡುವುದಾಗಿ ಘೋಷಿಸಿತು.

ಇದರಿಂದ ಕಾರು ಹೊಂದಿಲ್ಲದವರು ಏನು ಮಾಡಬೇಕು? ಅದಕ್ಕೆ ಕಾರು ಹೊಂದಿಲ್ಲದ ಅಮ್ಮ – ಮಗಳು ಕಾರ್ಡ್ಬೋರ್ಡ್ ನಲ್ಲಿ ಕಾರನ್ನು ಮಾಡಿಕೊಂಡು, ಅದರಲ್ಲಿ ರಸ್ತೆಗಿಳಿದು ಅಚ್ಚರಿ ಮೂಡಿಸಿದ್ದಾರೆ.

ಲಾ ಲೂವಿಯೆರ್ ನಗರದ ನಥಾಲಿ ಮೂರ್ಮನ್ಸ್ ಮತ್ತು ಆಕೆಯ 16 ಮಗಳು ಈ ಕ್ರಿಯಾಶೀಲತೆ ತೋರಿ ಸುದ್ದಿಯಾಗಿದ್ದಾರೆ. ನನ್ನ ಮಗಳು ಬಮೆಕ್ ಡೊನಾಲ್ಡ್ ಗೆ ಹೋಗಲು ಬಯಸಿದ್ದಳು, ಆದರೆ ನಮ್ಮಲ್ಲಿ ಕಾರು ಇಲ್ಲ, ಬೇರೆಯವರ ಕಾರಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ನಾವು ರಟ್ಟಿನಿಂದ ಮಾಡಿದ ಕಾರಿನಲ್ಲಿ ಹೋಗಬೇಕಾಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ನನ್ನ ಮಗಳು ಈ ಕಲ್ಪನೆ ಬಗ್ಗೆ ಹಾಸ್ಯ ಮಾಡಿದಳು, ನಂತರ ಸಹಾಯ ಮಾಡಲು ಆರಂಭಿಸಿದಳು ಎಂದಿದ್ದಾರೆ. ಸಂಪೂರ್ಣ ರಟ್ಟಿನಿಂದ ಮಾಡಿದ ಕಾರಿನ ಮೇಲೆ ‘ಕ್ಷಮಿಸಿ ನನಗೆ ಮೆಕ್ ಡೊನಾಲ್ಡ್ಸ್ ಬೇಕು, ಆದರೆ ಕಾರು ಇಲ್ಲ’ ಎಂಬ ಫಲಕದೊಂದಿಗೆ ಅವರು ರಸ್ತೆಯಲ್ಲಿ ಸಾಗಿದರು. ಅವರ ರಟ್ಟಿನ ಕಾರಿನಲ್ಲಿರುವ ಫೋಟೋ ಫೇಸ್ಬುಕ್ನಲ್ಲಿ ವೈರಲ್ ಆಗಿದೆ. 3000ಕ್ಕೂ ಅಧಿಕ ಶೇರ್ ಆಗಿದ್ದು, ನೂರಾರು ವಿನೋದಮಯ ಕಾಮೆಂಟ್ ಗಳು ಬಂದಿವೆ.

Quand tu as envie d un MC do mais que tu n as pas d auto place à l impro

Posted by Nathalie Moermans on Friday, May 1, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...