ನಿಮ್ಮ ಕಾರಿಗೆ ಒಳ್ಳೆಯ ಟಿಂಟೆಡ್ ಗಾಜನ್ನ ಅಳವಡಿಸೋಕೆ ನೀವು ಸಿದ್ಧರಿದ್ರೆ ಅದಕ್ಕೆ ತಕ್ಕಂತೆ ಹಣ ಖರ್ಚು ಮಾಡೋಕು ನೀವು ತಯಾರು ಇರಬೇಕು.
ಹಣ ಅರೆಂಜ್ ಆದ ಬಳಿಕ ಸರಿಯಾಗಿ ಟಿಂಟೆಡ್ ಗಾಜನ್ನ ಅಳವಡಿಸಿಕೊಡುವ ವರ್ಕ್ಶಾಪ್ನ್ನ ಹುಡುಕಬೇಕು. ಆದರೆ ಮನೆಯಲ್ಲೇ ಟಿಂಟೆಡ್ ಗಾಜನ್ನ ಅದೂ 1 ಸಾವಿರ ರೂಪಾಯಿ ಒಳಗಿನ ಬಜೆಟ್ನಲ್ಲಿ ಹಾಕೋಕೆ ಪ್ಲಾನ್ ಇದೆ ಅಂದರೆ ನಂಬ್ತೀರಾ ನೀವು..?
ಟಿಕ್ಟಾಕರ್ ಒಬ್ಬ ಮೂರು ಗೃಹ ಬಳಕೆ ಸಾಮಗ್ರಿಯನ್ನ ಬಳಕೆ ಮಾಡಿ ತನ್ನ ಕಾರಿನ ಗಾಜುಗಳನ್ನ ಟಿಂಟೆಡ್ ಆಗಿ ಬದಲಾವಣೆ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರಿಸಿದ್ದಾನೆ.
ಇದ್ದಕ್ಕಾಗಿ ಈತ ಬಳಕೆ ಮಾಡಿದ್ದು ಒಂದು ಮ್ಯಾಪಲ್ ಸಿರಪ್, ಚಾರ್ಕೋಲ್ ಟೂತ್ಪೇಸ್ಟ್ ಹಾಗೂ ಕ್ಲಿಂಗ್ ಫಿಲಂ. ಇದೆಲ್ಲಕ್ಕಾಗಿ ಆತ ಖರ್ಚು ಮಾಡಿದ್ದು 100 ರೂಪಾಯಿಗಿಂತಲೂ ಕಡಿಮೆ ಹಣ.
ರಸೆಲ್ ಬ್ರೌನ್ ಎಂಬ ವ್ಯಕ್ತಿ ತನ್ನ ಟಿಕ್ಟಾಕ್ ವಿಡಿಯೋದಲ್ಲಿ ಈ ಸುಲಭವಾದ ವಿಧಾನವನ್ನ ಹೇಳಿಕೊಟ್ಟಿದ್ದು ಈ ವಿಡಿಯೋ 46 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.