ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಜರುಗಿದ ಇಂಥದ್ದೇ ಘಟನೆಯೊಂದರ ವಿಡಿಯೋ ಫುಟೇಜ್ ಒಂದು ವೈರಲ್ ಆಗಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.
ಇಂತಹ ಸೈಕಲ್ನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..!
ಬೈಸಿಕಲ್‌ನಲ್ಲಿ ಬರುತ್ತಿದ್ದ 15 ವರ್ಷ ವಯಸ್ಸಿನ ಟೀನೇಜ್ ಹುಡುಗನೊಬ್ಬ ಕಾರು ಗುದ್ದಿದ ಪರಿಣಾಮ ಆತ ಕೆಲ ಕ್ಷಣಗಳ ಮಟ್ಟಿಗೆ ಗಾಳಿಯಲ್ಲಿ ತೇಲಿ ಕೆಳಗೆ ಬಿದ್ದಿದ್ದಾನೆ. ಈ ಘಟನೆಯು ಅಲ್ಲಿಯೇ ಇದ್ದ ಕಾರೊಂದರ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಡ್ನಿಯ ಸ್ಟಾನ್‌ಮೋರ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಬೈಸಿಕಲ್ ಸವಾರ ರಸ್ತೆ ದಾಟುತ್ತಿದ್ದ ವೇಳೆ ಅಷ್ಟೇನೂ ಸಂಚಾರ ದಟ್ಟಣೆಯೂ ಇರಲಿಲ್ಲ. ಆದರೆ ಆ ಟೀನೇಜರ್ ಇನ್ನೇನು ರಸ್ತೆ ದಾಟಿದ ಎನ್ನುವಷ್ಟರಲ್ಲಿ ದಿಢೀರ್ ಎಂದು ಬರುವ ಕಾರೊಂದು ಬೈಸಿಕಲ್‌ಗೆ ಗುದ್ದಿದ ಪರಿಣಾಮ ಆ ಹುಡುಗ ಗಾಳಿಯಲ್ಲಿ ತೇಲಿ ಕೆಳಗೆ ಬಿದ್ದಿದ್ದಾನೆ.
ಈ ವಿಡಿಯೋ ಕ್ಲಿಪ್ ಅನ್ನು ಡ್ಯಾಶ್ ಕ್ಯಾಮ್ ಓನರ್ಸ್ ಎಂಬ ಫೇಸ್ಬುಕ್ ಪುಟವೊಂದರಲ್ಲಿ ಮಾರ್ಚ್ 14ರಂದು ಶೇರ್ ಮಾಡಲಾಗಿದೆ.
https://www.facebook.com/watch/?v=280483823698541&t=2