ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ.
ಕೋವಿಡ್ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್ಗಳ ಕೆಲಸದ ಅವಧಿ ಕಳೆದ 10 ತಿಂಗಳಿನಿಂದ ಹೆಚ್ಚಾಗಿದೆ.
ಕೆಲ ಸಂಸ್ಥೆಗಳಲ್ಲಿ ಡೆಲಿವರಿ ಬಾಯ್ಗಳನ್ನ 12 – 15 ಗಂಟೆಗಳ ಅವಧಿಯವರೆಗೆ ದುಡಿಸಿಕೊಳ್ಳಲಾಗ್ತಿದೆ.
ಬರೋಬ್ಬರಿ 10 ತಿಂಗಳುಗಳ ಕಾಲ ಹೆಚ್ಚುವರಿ ಅವಧಿ ಕೆಲಸ ಮಾಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ.
ಇಷ್ಟೊಂದು ದೀರ್ಘ ಅವಧಿಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಎಲ್ಲಾ ಗ್ರಾಹಕರು ಟಿಪ್ಸ್ ನೀಡುತ್ತಾರೆ ಎಂದೂ ಹೇಳೋಕಾಗಲ್ಲ. ಕೆಲ ದಿನಗಳ ಹಿಂದಷ್ಟೇ ಭಾರೀ ಮಳೆಯ ನಡುವೆಯೂ ಡಾಮಿನೋಸ್ ಚಾಲಕ ಹೆಚ್ಚು ಸಾಮಗ್ರಿಗಳನ್ನ ಡೆಲಿವರಿ ಮಾಡಿದ್ರು.
ಆದರೆ ಅವರ ಈ ಪರಿಶ್ರಮಕ್ಕೆ ಟಿಪ್ಸ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆ ಡೆಲಿವರಿ ಬಾಯ್ ತಮ್ಮ ನೋವನ್ನ ಹೊರ ಹಾಕಿದ್ದಾರೆ. ಸಂಪೂರ್ಣ ಭಾವುಕನಾಗಿದ್ದ ಡೆಲಿವರಿ ಬಾಯ್ ಗ್ರಾಹಕರ ಎದುರಲ್ಲೇ ತನ್ನ ನೋವನ್ನ ಹೊರಹಾಕಿದ್ದು ಈ ವಿಡಿಯೋ ಸಖತ್ ವೈರಲ್ ಆಗಿದೆ.