
ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಸರ್ಕಾರಗಳು ಅದೆಷ್ಟೇ ಕ್ರಮ ತೆಗೆದುಕೊಳ್ಳುತ್ತಿದ್ದರೂ ಸಹ, ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಸರಿಯಾದ ಬೆಂಬಲ ಎಲ್ಲ ಕಡೆಯೂ ಸಿಗುತ್ತಿಲ್ಲ.
ಅಗತ್ಯವಿದ್ದಾಗ ಸ್ವಯಂ ದಿಗ್ಬಂಧಿಗಳಾಗಲು ಸೂಚಿಸಿದರೂ ಸಹ ಈ ಆದೇಶದ ಉಲ್ಲಂಘನೆ ಮಾಡುವವರಿಗೆ 10,000 ಪೌಂಡ್(9,51,152.50 ರೂ.) ದಂಡ ವಿಧಿಸಲು ಇಂಗ್ಲೆಂಡ್‌ನಲ್ಲಿ ನಿಯಮ ಜಾರಿಗೆ ತರಲಾಗಿದೆ. 1000 ಪೌಂಡ್‌ನಿಂದ-10000 ಪೌಂಡ್‌ಗಳವರೆಗೂ, ಈ ತಪ್ಪನ್ನು ಪದೇ ಪದೇ ಮಾಡಿದವರ ಮೇಲೆ ದಂಡ ವಿಧಿಸಲಾಗುತ್ತದೆ.
ವೈರಸ್‌ನ ಹಾಟ್‌ಸ್ಪಾಟ್‌ಗಳಲ್ಲಿ, ಸ್ಥಳೀಯ ಗುಪ್ತಚರ ಇಲಾಖೆಗಳ ನೆರವಿನಿಂದ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಕೋವಿಡ್-19ಗೆ ಪಾಸಿಟಿವ್ ಆಗಿ ಕಂಡುಬಂದವರ ಮೇಲೆ ಈ ನಿಯಮ ಅನ್ವಯವಾಗಲಿದೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟವ್ ಕಂಡು ಬಂದ ಬಳಿಕ ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇದ್ದರೂ ಸಹ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.