
ಅಮೆರಿಕದ ಸಂಚಾರೀ ಸಿಗ್ನಲ್ ಒಂದರ ಬಳಿ ಕಾರೊಂದರ ಕಿಟಕಿಗೆ ನೇತುಹಾಕಿಕೊಂಡು ಆಟವಾಡುತ್ತಿದ್ದ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಟುಸ್ಕಾಲೂಸಾ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ.
ಅಮೆರಿಕ ಅಲಬಾಮಾ ವಿವಿಯ ಫುಟ್ಬಾಲ್ ತಂಡದ ಟೀ-ಶರ್ಟ್ ಧರಿಸಿರುವ ಕೋತಿಯು ಕಾರಿನಲ್ಲಿ ರೈಡ್ ತೆಗೆದುಕೊಂಡು ಮೋಜು ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಕಾರಿನ ಕಿಟಕಿಯಿಂದ ಅಕ್ಕ ಪಕ್ಕ ನಿಂತಿದ್ದ ಸಂಚಾರಿಗಳನ್ನು ಈ ಕೋತಿ ಕುತೂಹಲದಿಂದ ನೋಡುತ್ತಿರುವುದನ್ನು ನೋಡಬಹುದಾಗಿದೆ.