alex Certify ಇದು ನದಿ ಅಂದ್ರೆ ನೀವು ನಂಬಲೇಬೇಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ನದಿ ಅಂದ್ರೆ ನೀವು ನಂಬಲೇಬೇಕು….!

ಸಂಪೂರ್ಣ ಕಸದಿಂದ ತುಂಬಿ ಹೋದ ನದಿಯೊಂದರಲ್ಲಿ ವ್ಯಕ್ತಿ ನಡೆದುಕೊಂಡು ಹೋಗ್ತಿರೋ ದೃಶ್ಯವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಸ್ಥಳ ಬ್ರೆಜಿಲ್​ಗೆ ಸೇರಿದ್ದು ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ಸರಪುರಿ ನದಿಯಲ್ಲಿರುವ ಕಸದ ಸಂಗ್ರಹ ಇದಾಗಿದ್ದು ಬರಿಗಾಲಲ್ಲಿ ನಡೆಯುತ್ತಿರುವ ವ್ಯಕ್ತಿ ಕಷ್ಟ ಪಟ್ಟು ನದಿ ದಾಟುತ್ತಿರೋದನ್ನ ಕಾಣಬಹುದಾಗಿದೆ. ನ್ಯೂಯಾರ್ಕ್​ ಟೈಮ್ಸ್ ಮಾಡಿರುವ ವರದಿ ಪ್ರಕಾರ ನದಿಯ ಪಕ್ಕದಲ್ಲಿ ವಾಸಿಸುವ ಜನರಿಗೆ ಯಾವುದೇ ತ್ಯಾಜ್ಯ ಸಂಸ್ಕರಣಾ ಘಟಕವಿಲ್ಲ.

ಹೀಗಾಗಿಯೇ ಈ ಪ್ರದೇಶ ಇಷ್ಟೊಂದು ಮಲಿನವಾಗಿದೆ ಎನ್ನಲಾಗಿದೆ. ರಿಯೋ ಒಲಂಪಿಕ್ಸ್​ಗೂ ಮುನ್ನ ಈ ಭಾಗ ಸ್ಚಚ್ಚಗೊಳಿಸೋದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಸರ್ಕಾರ ಈವರೆಗೂ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...