ಸಂಪೂರ್ಣ ಕಸದಿಂದ ತುಂಬಿ ಹೋದ ನದಿಯೊಂದರಲ್ಲಿ ವ್ಯಕ್ತಿ ನಡೆದುಕೊಂಡು ಹೋಗ್ತಿರೋ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸ್ಥಳ ಬ್ರೆಜಿಲ್ಗೆ ಸೇರಿದ್ದು ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.
ಸರಪುರಿ ನದಿಯಲ್ಲಿರುವ ಕಸದ ಸಂಗ್ರಹ ಇದಾಗಿದ್ದು ಬರಿಗಾಲಲ್ಲಿ ನಡೆಯುತ್ತಿರುವ ವ್ಯಕ್ತಿ ಕಷ್ಟ ಪಟ್ಟು ನದಿ ದಾಟುತ್ತಿರೋದನ್ನ ಕಾಣಬಹುದಾಗಿದೆ. ನ್ಯೂಯಾರ್ಕ್ ಟೈಮ್ಸ್ ಮಾಡಿರುವ ವರದಿ ಪ್ರಕಾರ ನದಿಯ ಪಕ್ಕದಲ್ಲಿ ವಾಸಿಸುವ ಜನರಿಗೆ ಯಾವುದೇ ತ್ಯಾಜ್ಯ ಸಂಸ್ಕರಣಾ ಘಟಕವಿಲ್ಲ.
ಹೀಗಾಗಿಯೇ ಈ ಪ್ರದೇಶ ಇಷ್ಟೊಂದು ಮಲಿನವಾಗಿದೆ ಎನ್ನಲಾಗಿದೆ. ರಿಯೋ ಒಲಂಪಿಕ್ಸ್ಗೂ ಮುನ್ನ ಈ ಭಾಗ ಸ್ಚಚ್ಚಗೊಳಿಸೋದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಸರ್ಕಾರ ಈವರೆಗೂ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.