ಅಮೆರಿಕದ ಫ್ಲೋರಿಡಾದಲ್ಲಿ ಗುರುತಿಸಲ್ಪಟ್ಟಿರುವ ಸಮುದ್ರ ಜೀವಿಯ ಬೆನ್ನಿನ ಮೇಲೆ ಟ್ರಂಪ್ ಎಂದು ಕೆತ್ತಲಾದ ಹೃದಯವಿದ್ರಾವಕ ವಿಡಿಯೋವೊಂದು ವೈರಲ್ ಆಗಿದೆ.
ಈ ಕ್ಲಿಪ್ ಎಲ್ಲೆಡೆ ವ್ಯಾಪಕವಾಗಿ ಶೇರ್ ಆಗುತ್ತಿದ್ದಂತೆಯೇ ಅಮೆರಿಕ ಮೀನು ಮತ್ತು ವನ್ಯಜೀವಿ ಸೇವೆ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೇಲಿನ ಕಿರುಕುಳದ ಬಗ್ಗೆ ತನಿಖೆ ಆರಂಭಿಸಿದೆ.
ಫ್ಲೋರಿಡಾದ ಗಲ್ಫ್ ಕರಾವಳಿಯ ಸಿಟ್ರಸ್ ಕೌಂಟಿಯಲ್ಲಿರುವ ಹೋಮೋಸಾಸ್ಸಾ ನದಿಯಲ್ಲಿರುವ ಮನಾಟೆ ಸಮುದ್ರ ಜೀವಿಯ ಬೆನ್ನಿನ ಮೇಲೆ ಈ ರೀತಿ ಬರೆಯಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಫೆಡರಲ್ ಜೀವಿ ಅಧಿಕಾರಿ ಕ್ರೇಗ್ ಕ್ಯಾವನ್ನಾ , ವನ್ಯಜೀವಿ ಸಂರಕ್ಷಣೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಈ ಕೃತ್ಯ ಎಸಗಿದವರ ಪತ್ತೆಗೆ ತನಿಖೆ ನಡೆಸಲಾಗ್ತಿದೆ ಎಂದು ಹೇಳಿದ್ರು.
https://www.facebook.com/FOX35Orlando/videos/759676211309435/?t=11