ಬಲವಾಗಿ ಬೀಸಿದ ಗಾಳಿಯಿಂದ ಸೇತುವೆಯೊಂದು ಅಲುಗಾಡಿದ್ದು, ತಾತ್ಕಾಲಿಕವಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅದನ್ನು ಮುಚ್ಚಿದ ಪ್ರಸಂಗ ಚೀನಾದಲ್ಲಿ ನಡೆದಿದೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೇತುವೆ ಅಲುಗಾಡಿದ ದೃಶ್ಯಗಳು ಕಾಣಿಸುತ್ತದೆ. ಗುವಾಂಗ್ಡಾಂಗ್ ಮತ್ತು ಡೊಂಗ್ಗುವಾನ್ ಸಂಪರ್ಕಿಸುವ ಸೇತುವೆಯು ಗಾಳಿಯ ರಭಸಕ್ಕೆ ಸಮುದ್ರದ ಅಲೆಯ ರೀತಿ ಅಲುಗಾಡಿತು.
ಬಳಿಕ ಪೊಲೀಸರು ಸಂಚಾರಕ್ಕೆ ತಡೆಯೊಡ್ಡಿದರು. ಗಾಳಿ ತಗ್ಗಿದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಗಾಳಿಯಿಂದ ಸೇತುವೆಗೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.