ಕೋಕಾ ಬೀಚ್ ಏರ್ ಶೋನಲ್ಲಿ ಭಾಗಿಯಾಗಿದ್ದ 2ನೇ ವಿಶ್ವ ಯುದ್ಧದ ಏರ್ಕ್ರಾಫ್ಟ್ ಸೋಮವಾರ ಫ್ಲೋರಿಡಾದ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಯುಟ್ಯೂಬ್ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ವಿಮಾನವು ನಿಧಾನವಾಗಿ ಸಮುದ್ರದಲ್ಲೇ ಲ್ಯಾಂಡ್ ಆಗ್ತಿರೋದನ್ನ ನೀವು ನೋಡಬಹುದಾಗಿದೆ.
ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸವಾಲಿನ ಸ್ಥಿತಿಯಲ್ಲೂ ಸಮುದ್ರದಲ್ಲಿ ಅತ್ಯಂತ ನಾಜೂಕಾಗಿ ವಿಮಾನ ಸ್ಪರ್ಶ ಮಾಡಿದ ಪೈಲಟ್ ಚಾಣಕ್ಷತೆಗೆ ನೆಟ್ಟಿಗರು ತಲೆ ಬಾಗಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ನನಗೆ ವಿಮಾನದಲ್ಲಿ ಹಾರಾಡಿ ಅನುಭವವಿಲ್ಲ. ಆದರೆ ಈ ಲ್ಯಾಂಡಿಂಗ್ ಮಾತ್ರ ನೋಡೋಕೆ ಬಹಳ ಸೊಗಸಾಗಿದೆ ಎಂದು ವರ್ಣಿಸಿದ್ದಾರೆ.
ಇನ್ನು ಈ ವಿಚಾರವಾಗಿ ಹೇಳಿಕೆ ನೀಡಿರುವ ಕೋಕಾ ಬೀಚ್ ಏರ್ ಷೋ ಅಧಿಕಾರಿಗಳು, ವಾರ್ಬರ್ಡ್ ಪರೇಡ್ನಲ್ಲಿ ಏರ್ಕ್ರಾಫ್ಟ್ ಭಾಗಿಯಾಗಿದ್ದ ವೇಳೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ.
ಪೈಲಟ್ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಸಮುದ್ರದಲ್ಲಿ ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಪೈಲಟ್ನ ರಕ್ಷಣೆಗೆ ಧಾವಿಸಿದ್ದಾರೆ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಈ ವಿಮಾನವನ್ನ ಅಮೆರಿಕ ಬಳಕೆ ಮಾಡಿತ್ತು. ಏರ್ ಶೋಗೆ ಈ ವಿಮಾನವನ್ನ ಬಳಕೆ ಮಾಡುವ ಮುನ್ನ ಇದನ್ನ ಸಂಪೂರ್ಣ ರಿಪೇರಿ ಮಾಡಲಾಗಿತ್ತು ಎಂದು ಕೋಕಾ ಬೀಚ್ ಏರ್ ಶೋ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
https://youtu.be/oWxZ8cXjNMw