ಮುಂಬರುವ ವಾರಗಳಲ್ಲಿ ವೆನಿಜುವೆಲಾ ಕೊರೊನಾ ವಿರುದ್ಧ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯ 10 ಮಿಲಿಯನ್ ಡೋಸ್ಗಳನ್ನ ಸ್ವೀಕರಿಸಲಿದೆ ಎಂದು ಅಧ್ಯಕ್ಷ ನಿಕೋಲಸ್ ಮಡುರೋ ಹೇಳಿದ್ದಾರೆ.
ರಷ್ಯಾದ ರಾಯಭಾರಿ ನಮಗೆ ಮೊದಲ ಹಂತದಲ್ಲಿ 10 ಮಿಲಿಯನ್ ಸ್ಪುಟ್ನಿಕ್ ವಿ ಲಸಿಕೆಗಳನ್ನ ಶೀಘ್ರದಲ್ಲೇ ಕಳುಹಿಸಲಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಈ ಲಸಿಕೆಗಳು ಬಂದ ಕೂಡಲೇ ಅವಶ್ಯವಿರುವವರಿಗೆ ನೀಡಲಾಗುತ್ತದೆ ಎಂದು ಹೇಳಿದ್ರು.
ಅಕ್ಟೋಬರ್ 2020 ರಲ್ಲಿ, ವೆನೆಜುವೆಲಾ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಭಾಗವಾಗಿ ಸ್ಪುಟ್ನಿಕ್ ವಿ ಅನ್ನು ಪಡೆಯಿತು. ಡಿಸೆಂಬರ್ ತಿಂಗಳಲ್ಲಿ ಲ್ಯಾಟಿನ್ ಅಮೆರಿಕ, ರಷ್ಯಾದೊಂದಿಗೆ ಕೊರೊನಾ ಲಸಿಕೆ ವಿತರಣೆ ಒಪ್ಪಂದಕ್ಕೆ ಸಹಿ ಹಾಕಿತು.