ಟ್ಯಾಟೂ ಕ್ರೇಜ್ ಇಂದು ನಿನ್ನೆದಲ್ಲ. ಬಹಳ ವರ್ಷಗಳಿಂದ ಈ ಟ್ಯಾಟೂ ಟ್ರೆಂಡ್ ನಮ್ಮಲ್ಲಿದೆ. ನಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಯಾವುದಾದರೋ ಚಿತ್ರವನ್ನ ದೇಹದ ಮೇಲೆ ಬಿಡಿಸಿಕೊಳ್ಳೋದನ್ನ ನೋಡಿರ್ತೀರಾ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಈ ಟ್ಯಾಟೂ ನೋಡ್ತಿದ್ರೆ ತಲೆ ಗಿರ್ ಅನ್ನೋದು ಪಕ್ಕಾ.
ಮ್ಯಾಟ್ ಪೆಹ್ರೋಸನ್ ಎಂಬ ಟ್ಯಾಟೂ ಆರ್ಟಿಸ್ಟ್ ಇಲ್ಯೂಶನ್ ತಂತ್ರ ಬಳಸಿ ರ್ಯಾನ್ಸ್ ಎಂಬವರ ತಲೆ ಮೇಲೆ ಈ ರೀತಿಯ ಟ್ಯಾಟೂ ಹಾಕಿದ್ದಾರೆ. ಈ ಟ್ಯಾಟೂವನ್ನ ದೂರದಿಂದ ನೋಡ್ತಿದ್ರೆ ತಲೆಯಲ್ಲಿ ಕುಳಿ ಬಿದ್ದಿದೆಯೇನೋ ಎಂದು ಎನಿಸುವಂತಿದೆ.
ಟ್ಯಾಟೂ ಆರ್ಟಿಸ್ಟ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಫೋಟೋವನ್ನ ಹಾಕಿದ್ದೇ ತಡ ಟ್ಯಾಟೂ ಪ್ರಿಯರಂತೂ ಫುಲ್ ಫಿದಾ ಆಗಿದ್ದಾರೆ. ಟ್ಯಾಟೂ ಕಲಾವಿದನ ಕೈಚಳಕ ಸೋಶಿಯಲ್ ಮೀಡಿಯಾದಲ್ಲೂ ಮ್ಯಾಜಿಕ್ ಮಾಡಿದೆ.
https://www.instagram.com/p/B_YKm7-Dwt4/?utm_source=ig_web_copy_link