ಅಮೆರಿಕದ ಉತಾಹ್ ಎಂಬಲ್ಲಿ ಪ್ರತಿ ವರ್ಷ 6000 ದಿಂದ 10000 ದಷ್ಟು ಜಿಂಕೆಗಳು ಸಾವನ್ನಪ್ಪುತ್ತಿವೆ ಎಂಬ ಭಯಾನಕ ಅಂಶ ಅಧ್ಯಯನವೊಂದರಲ್ಲಿ ಹೊರಬಿದ್ದಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 14700ಕ್ಕೂ ಹೆಚ್ಚು ಜಿಂಕೆಗಳು ವಾಹನ ಅಪಘಾತದಲ್ಲಿ ಮೃತಪಟ್ಟಿವೆ.
ಜಿಂಕೆಗಳು ಅಪಘಾತದಿಂದ ಸಾವಿಗೀಡಾಗೋದನ್ನ ತಪ್ಪಿಸುವ ಸಲುವಾಗಿ ಉತಾಹ್ನ ಅಧಿಕಾರಿಗಳು ಒಂದು ಸೇತುವೆ ನಿರ್ಮಾಣ ಮಾಡುವ ಮೂಲಕ ಹೊಸ ಮಾರ್ಗವನ್ನ ರೂಪಿಸಿದೆ.
ಪಾರ್ಲಿಸ್ ಕಣಿವೆಯಲ್ಲಿ ವನ್ಯಜೀವಿ ಸಂಪನ್ಮೂಲ ಇಲಾಖೆ ಅಂತರ್ರಾಜ್ಯ ರಸ್ತೆ 80ಕ್ಕೆ ಅಡ್ಡಲಾಗಿ 2018ರಲ್ಲಿ ಸೇತುವೆ ನಿರ್ಮಾಣ ಮಾಡಿತ್ತು. ಈ ಸೇತುವೆಯನ್ನ ಕಾಡು ಪ್ರಾಣಿಗಳು ಬಳಕೆ ಮಾಡುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ಉತಾಹ್ ಸಾರಿಗೆ ಇಲಾಖೆ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ.
ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಉತಾಹ್ ಸಾರಿಗೆ ಇಲಾಖೆ ವಿಡಿಯೋ ಬಿಡುಗಡೆ ಮಾಡಿದ್ದು ಇದರಲ್ಲಿ ಮುಳ್ಳು ಹಂದಿ, ಮೂಸ್ಗಳು, ಜಿಂಕೆ. ಕರಡಿ ಸೇರಿದಂತೆ ಹಲವು ಪ್ರಾಣಿಗಳು ಸೇತುವೆ ಮೇಲೆ ನಡೆದುಕೊಂಡು ಹೋಗೋದನ್ನ ನೋಡಬಹುದಾಗಿದೆ.
https://www.facebook.com/UtahDWR/videos/3416838815036581/