alex Certify ಕೊರೋನಾ ತಡೆ ಪ್ರಯೋಗ ‘ಭರ್ಜರಿ’ ಸಕ್ಸಸ್: ಅಮೆರಿಕದ ಈ ಔಷಧ ನೀಡಿದ 500 ಮಂದಿ ಬೇಗನೆ ಗುಣಮುಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆ ಪ್ರಯೋಗ ‘ಭರ್ಜರಿ’ ಸಕ್ಸಸ್: ಅಮೆರಿಕದ ಈ ಔಷಧ ನೀಡಿದ 500 ಮಂದಿ ಬೇಗನೆ ಗುಣಮುಖ

ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕು ಅಮೆರಿಕದಲ್ಲಿ ಸಾವಿನ ನರ್ತನವನ್ನೇ ಮಾಡುತ್ತಿದೆ.

ಈ ನಡುವೆ ಅಮೆರಿಕ ಕೊರೋನಾ ಸೋಂಕಿಗೆ ಔಷಧವನ್ನೇ ಕಂಡು ಹಿಡಿದಿದೆ. ಅಮೆರಿಕ ಅಧ್ಯಕ್ಷರ ವೈಜ್ಞಾನಿಕ ಸಲಹೆಗಾರ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಪ್ರಾಯಯೋಗಿಕ ಹಂತದಲ್ಲಿ ಔಷಧಿಗೆ ಯಶಸ್ವಿ ಫಲಿತಾಂಶ ಬಂದಿದೆ.

ಕೊರೋನಾ ಸೋಂಕಿಗೆ ಅಮೆರಿಕ ಔಷಧ ಕಂಡು ಹಿಡಿದಿದೆ. ವರದಿಯ ಪ್ರಯೋಗ ರೆಮ್ ಡಿಸಿವರ್ ಔಷಧಿಯ ಪ್ರಯೋಗ ಯಶಸ್ವಿಯಾಗಿದೆ. ಗಿಲೀಡ್ ಸೈನ್ಸಸ್ ಇಂಕ್ ಕಂಪನಿಯ ಸಂಶೋಧನೆ ಪ್ರಯೋಗ ಯಶಸ್ವಿಯಾಗಿದೆ.

1000 ಜನರ ಮೇಲೆ ರೆಮ್ ಡಿಸಿವರ್ ಔಷಧವನ್ನು ಪ್ರಯೋಗಿಸಲಾಗಿದೆ. ಔಷಧ ಪಡೆದ ಶೇಕಡ 50 ರೋಗಿಗಳು ಗುಣಮುಖರಾಗಿದ್ದಾರೆ. ಟ್ರಯಲ್ ನಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿದೆ ಎಂದು ಅಮೆರಿಕ ಹೇಳಿದೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಈ ಔಷಧ ಪಡೆದ ಸೋಂಕಿತರು ಕಡಿಮೆ ಸಮಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷರ ಪ್ರಮುಖ ವೈಜ್ಞಾನಿಕ ಸಲಹೆಗಾರರು ಔಷಧದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...