alex Certify ಭಾರತಕ್ಕೆ ವೆಂಟಿಲೇಟರ್ ಕೊಡುತ್ತಂತೆ ಅಮೆರಿಕಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ವೆಂಟಿಲೇಟರ್ ಕೊಡುತ್ತಂತೆ ಅಮೆರಿಕಾ…!

ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗುತ್ತಿದೆ. ಕೊರೊನಾ ಸೋಂಕು ಮನುಷ್ಯನಲ್ಲಿ ಹೆಚ್ಚಾದಂತೆ ವೆಂಟಿಲೇಟರ್ ಅವಶ್ಯವಾಗಿ ಬೇಕೆ ಬೇಕು. ಸದ್ಯ ನಮ್ಮ ದೇಶದಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಆದರೆ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಆದರೆ ಕೊರೊನಾ ಸೋಂಕಿತರು ಹೆಚ್ಚಾದಂತೆ ವೆಂಟಿಲೇಟರ್ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಕೂಡ ಇದೆ. ಹೀಗಿರುವಾಗ ಅಮೆರಿಕಾ ಭಾರತದ ಬೆನ್ನಿಗೆ ನಿಂತಿದೆ.

ಹೌದು, ಭಾರತ ನಮ್ಮ ಸ್ನೇಹಿತ ಅವರಿಗೆ ನಾವು ವೆಂಟಿಲೇಟರ್ ಒದಗಿಸುತ್ತೇವೆ ಎಂದು ಹೇಳಿದೆ. ಈ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಟ್ವಿಟ್ ಮಾಡಿದ್ದಾರೆ. ನರೇಂದ್ರ ಮೋದಿ ನಮ್ಮ ಸ್ನೇಹಿತರು. ಹೀಗಾಗಿ ನಾವು ಅವರಿಗೆ ವೆಂಟಿಲೇಟರ್ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಉಪಕರಣಗಳು ಹೇಗೆ ಭಾರತಕ್ಕೆ ತಲುಪುತ್ತವೆಯೋ ಗೊತ್ತಿಲ್ಲ.

ಇನ್ನು ಈ ಹಿಂದೆ ಭಾರತ ಅಮೆರಿಕಾಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕಳುಹಿಸಿತ್ತು. ಇದೀಗ ಅಮೆರಿಕಾ ಭಾರತಕ್ಕೆ ವೆಂಟಿಲೇಟರ್ ವ್ಯವಸ್ಥೆ ಮಾಡುತ್ತಿದೆ.‌ ಒಟ್ನಲ್ಲಿ ವಿಶ್ವದ ದೊಡ್ಡಣ್ಣ ಭಾರತದ ಸಹಾಯಕ್ಕೆ ನಿಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...