ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ.
ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ ಮೂಲದ ಲೈಬ್ರರಿಯ ಒಬ್ಬರು ಮನೆಬಾಗಿಲುಗಳಿಗೆ ಪುಸ್ತಕಗಳನ್ನು ಡ್ರೋನ್ ಮೂಲಕ ಕಳುಹಿಸುತ್ತಿದ್ದಾರೆ.
ಶಾಲೆಯೊಂದರ ಗ್ರಂಥಾಲಯದಲ್ಲಿ ಲೈಬ್ರರಿಯನ್ ಆಗಿರುವ ಕೆಲ್ಲಿ ಪಾಸ್ಸೆ ಈ ವಿನೂತನ ಐಡಿಯಾಕ್ಕೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಬೇರೆ ಶಾಲೆಗಳೂ ಸಹ ಇದೇ ಹಾದಿಯಲ್ಲಿ ಕಾಲಿಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಫಾರ್ಮ್ ಮೂಲಕ ಯಾವೆಲ್ಲಾ ಪುಸ್ತಗಳು ಬೇಕೆಂದು ತಿಳಿದುಕೊಂಡು, ಅವುಗಳನ್ನು ಪ್ಯಾಕ್ ಮಾಡಿ ಡ್ರೋನ್ ಮೂಲಕ ಕಳುಹಿಸುತ್ತಿದ್ದಾರೆ ಪಾಸ್ಸೆ.