ವಿಶ್ವದಲ್ಲಿ ಕಾಣಿಸಿಕೊಂಡಿರುವ ಕೊರೊನಾದ ಆಫ್ಟರ್ ಎಫೆಕ್ಟ್ ಇದೀಗ ಭಾರಿ ಕುತೂಹಲ ಮೂಡಿಸಿದೆ. ಎಲ್ಲೆಡೆ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಶಾಲೆಯಲ್ಲಿ ಯಾವ ರೀತಿ ಅಳವಡಿಸಬೇಕು ಎನ್ನುವ ಪ್ರಶ್ನೆಗೆ ಅಮೆರಿಕ ಶಿಕ್ಷಕನೊಬ್ಬರು ವಿನೂತನ ಪ್ಲಾನ್ ನೀಡಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ರೆಕ್ಸ್ ಚಾಂಪ್‌ಮ್ಯಾನ್ ಶೇರ್ ಮಾಡಿರುವ ವಿಡಿಯೊದಲ್ಲಿ, ಅಮೆರಿಕದ ಶಾಲೆಯೊಂದರಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಗಾಜಿನ ಕ್ಯಾಬಿನ್ ಆರಂಭಿಸಿದೆ. ಆದರೆ ಮಕ್ಕಳಿಗೆ ಇದರಿಂದ ಹೆದರಿಕೆಯಾಗಬಾರದು ಎನ್ನುವ ಉದ್ದೇಶದಿಂದ, ಟ್ರಂಕ್ ಎಂಜಿನ್ ರೀತಿ ಮಾರ್ಪಾಡು ಮಾಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಶಿಕ್ಷಕರ ಈ ಯೋಚನೆಗೆ ನೆಟ್ಟಿಗರು ಶಹಬಾಸ್‌ಗಿರಿ ನೀಡಿದ್ದು, ಈ ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಇದೀಗ ಸುಮಾರು 3.3 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 1.20 ಲಕ್ಷ ಲೈಕ್ ಹಾಗೂ 20 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿದ್ದು, ಭಾರಿ ವೈರಲ್ ಆಗಿದೆ.